ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಳ್ಳನನ್ನು ಅಟ್ಟಾಡಿಸಿ ಹಿಡಿದ ಪೊಲೀಸ್;‌ ಕಾರ್ಯಾಚರಣೆ ವೀಡಿಯೊ ವೈರಲ್

ಮಂಗಳೂರು: ಸಿನಿಮೀಯ ರೀತಿಯಲ್ಲಿ ಕಳ್ಳನನ್ನು ಪೊಲೀಸರು‌ ಹಿಡಿದಿದ್ದಾರೆ. ನಗರದ ಪೊಲೀಸ್ ಕಮಿಷನರ್ ಕಚೇರಿ ಮುಂಭಾಗ ಇರುವ ನೆಹರೂ ಮೈದಾನದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಹಾಗೂ ಹಣವನ್ನು ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಪೊಲೀಸ್ ಸಿಬ್ಬಂದಿ ಸಾಹಸಿಕವಾಗಿ ಹಿಡಿದು ಹೆಡೆಮುರಿ ಕಟ್ಟಿದ್ದಾರೆ.

ಈ ಮೊದಲು ಮಾಹಿತಿ ತಿಳಿದ ನಗರ ಪೊಲೀಸ್ ಕಮಿಷನರ್ ಶಶಿಕಾಂತ್‌ ಅವರು ಆರೋಪಿಯನ್ನು ಹಿಡಿಯಲು ಸೂಚನೆ, ಮಾರ್ಗದರ್ಶನ‌ ನೀಡಿದ್ದರು. ಕಾರ್ಯಾಚರಣೆಯಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಹಿಡಿದು, ಆತನಿಂದಲೇ ಪ್ಲ್ಯಾನ್ ಮಾಡಿಸಿ ಇನ್ನಿಬ್ಬರನ್ನು ಬಲೆಗೆ ಕೆಡವಲು ಮುಂದಾಗಿದ್ದಾರೆ.

ಆದರೆ, ಪೊಲೀಸರ ಯುಕ್ತಿ ಗೊತ್ತಾಗಿ ಆರೋಪಿಗಳು ಎಸ್ಕೇಪ್ ಆಗಲು ಯತ್ನಿಸಿದರು. ಈ ವೇಳೆ ಸುಮಾರು ಒಂದು ಕಿಲೋಮೀಟರ್ ನಷ್ಟು ದೂರ ಓಡಿ ಕಳ್ಳನನ್ನು ಹಿಡಿಯಲು ಪೊಲೀಸರು ಯಶಸ್ವಿಯಾಗಿದ್ದಾರೆ. ಆ ಬಳಿಕ ಇನ್ನಿಬ್ಬರೂ ʼಪೊಲೀಸ್‌ ಬಲೆʼಗೆ ಬಿದ್ದಿದ್ದಾರೆ. ಈ ಕಾರ್ಯಾಚರಣೆಯ ದೃಶ್ಯಾವಳಿ ಇಲ್ಲಿದೆ ನೋಡಿ...‌‌

Edited By : Manjunath H D
PublicNext

PublicNext

13/01/2022 12:33 pm

Cinque Terre

59.24 K

Cinque Terre

22

ಸಂಬಂಧಿತ ಸುದ್ದಿ