ಸುರತ್ಕಲ್ : ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ಎಂಬಲ್ಲಿ ಸಾಲ ಬಾಧೆಯಿಂದ ಬೇಸತ್ತ ಯುವಕ ಕಛೇರಿಯಲ್ಲಿ ನೇಣಿಗೆ ಶರಣಾದ ಘಟನೆ ಕುಳಾಯಿಯಲ್ಲಿ ಸೋಮವಾರ ನಡೆದಿದೆ. ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಹೊಸ ಕಾಡು ನಿವಾಸಿ ಎಸ್ಓ ಲೇಔಟ್ ನ ಸುಶಾಂತ್ (26) ಎಂದು ಗುರುತಿಸಲಾಗಿದೆ.
ಮೃತ ಸುಶಾಂತ್ ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ಟವೆಲ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಸುಶಾಂತ್ ಪೋಷಕರು 15 ವರ್ಷಗಳ ಹಿಂದೆ ವಿಧಿವಶರಾಗಿದ್ದು, ಸಹೋದರ ಅಶ್ವಿತ್ (31) ಅವರನ್ನು ಅಗಲಿದ್ದಾರೆ.
ಸಾಯುವ ಮುನ್ನ ಕ್ಷಮೆಯಾಚಿಸಿ, ಸಾಲದ ಕಾರಣದಿಂದ ಈ ನಿರ್ಧಾರ ಮಾಡಿದ್ದು, ತುಳು ಮೌಖಿಕ ಭಾಷೆ ಬಳಸಿ ಕನ್ನಡ ಭಾಷೆಯಲ್ಲಿ ಡೆತ್ ನೋಟ್ ಬರೆದಿಡಲಾಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
10/01/2022 05:19 pm