ಮಂಗಳೂರು: ಪ್ರಕರಣವೊಂದರ ನಿಮಿತ್ತ ಠಾಣೆಯಲ್ಲಿರುವ ವಾಹನವೊಂದರ ನಂಬರ್ ಪ್ಲೇಟ್ ಅನ್ನೇ ನಕಲಿ ಮಾಡಿ ಆ್ಯಕ್ಟಿವ್ ಹೋಂಡಾ ವಾಹನಕ್ಕೆ ಅಳವಡಿಸಿ ತಿರುಗಾಡುತ್ತಿರುವ ವಂಚಕ ಭೂಪನಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣವೊಂದರ ನಿಮಿತ್ತ ಡಿಯೋ ದ್ವಿಚಕ್ರ ವಾಹನವೊಂದು ನಗರದ ಉತ್ತರ ಪೊಲೀಸ್ ಠಾಣೆಯಲ್ಲಿ ಬಾಕಿಯಾಗಿದೆ. ಆದರೆ ಇದೇ ಡಿಯೋ ವಾಹನದ ನಂಬರ್ ಪ್ಲೇಟ್(KA 19 HD 6497) ಅನ್ನು ಖದೀಮನೋರ್ವನು ಆ್ಯಕ್ಟಿವ್ ಹೋಂಡಾ ವಾಹನಕ್ಕೆ ಅಳವಡಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ವಾಹನವು ಮಂಗಳೂರು ನಗರದಲ್ಲಿ ಸುತ್ತಾಡುತ್ತಿದೆ ಎಂಬ ಅನುಮಾನವು ಮೂಡಿದೆ.
ಅಲ್ಲದೆ ಈ ಖದೀಮನು ಮಂಗಳೂರು ಸಿಟಿ ಸೆಂಟರ್ ಮಾಲ್ ನಲ್ಲಿರುವ ಪಾರ್ಕಿಂಗ್ ಏರಿಯಾದಲ್ಲಿರುವ 2 ಹೆಲ್ಮೆಟ್ ಅನ್ನು ಕಳವುಗೈದಿರುವ ಬಗ್ಗೆಯೂ ಸಿಸಿ ಕ್ಯಾಮರಾ ದಾಖಲೆಯಿದೆ. ಇದೀಗ ದ್ವಿಚಕ್ರ ವಾಹನ ಸಹಿತ ಈತನ ವೀಡಿಯೋವನ್ನು ಬಿಡುಗಡೆ ಮಾಡಿರುವ ಪೊಲೀಸರು ಸುಳಿವು ಸಿಕ್ಕರೆ ತಕ್ಷಣ ಮಂಗಳೂರು ಉತ್ತರ ಪೊಲೀಸ್ ಠಾಣೆಯ ನಂಬರ್ 0824-2220516, 9480805338 ನೆ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಲು ಕೋರಿದ್ದಾರೆ.
Kshetra Samachara
09/01/2022 10:11 am