ಪಡುಬಿದ್ರೆ: ಇಬ್ಬರು ಯುವಕರು ಮತ್ತು ಒರ್ವ ಯುವತಿ ಮಧ್ಯೆ ಸಾರ್ವಜನಿಕ ಸ್ಥಳದಲ್ಲೇ ಹೊಡೆದಾಟ ನಡೆದು ಜನರಿಗೆ ಪುಕ್ಕಟೆ ಮನರಂಜನೆ ಸಿಕ್ಕಿದ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ.
ಪಡುಬಿದ್ರೆ ಸಮೀಪ ಮೂವರು ವಿದ್ಯಾರ್ಥಿಗಳು ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಪಡುಬಿದ್ರಿ ಬೀಡು ಬಳಿ ಪೆಟ್ರೋಲ್ ಖಾಲಿಯಾಗಿದೆ. ಈ ಸಂದರ್ಭ ವಿದ್ಯಾರ್ಥಿನಿ ಮತ್ತು ಇಬ್ಬರು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು,ಹೊಡೆದಾಟ ನಡೆದಿದೆ.
ಈ ಮಾಹಿತಿ ಪಡೆದ ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಹೋಗಿ ಗಲಾಟೆ ನಿಲ್ಲಿಸಿದ್ದಾರೆ. ಬಳಿಕ ಅವರನ್ನು ಚಿಕಿತ್ಸೆಗಾಗಿ ಪಡುಬಿದ್ರಿ ಖಾಸಗಿ ಆಸ್ಪತ್ರೆ ಕರೆತರಲಾಯಿತಾದರೂ ವಿದ್ಯಾರ್ಥಿಗಳು ಪೊಲೀಸರಿಗೇ ಆವಾಜ್ ಹಾಕಿದ್ದಾರೆ. ನಮ್ಮ ಮೈ ಮುಟ್ಡಬೇಡಿ, ನಾವು ಯಾರು, ನಮ್ಮ ತಂದೆ ಯಾರು ಎಂಬುದನ್ನು ನಿಮಗೆ ನಾಳೆ ತಿಳಿಸುತ್ತೇವೆ. ನಾವು ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು. ಎಂದು ಸಾರ್ವಜನಿಕವಾಗಿಯೇ ಕಿರಾಚಾಡಿದ್ದಾರೆ..ಇಂಗ್ಲೀಷ್, ಹಿಂದಿ ಹಾಗೂ ತಮಿಳಿನಲ್ಲಿ ಮಾತನಾಡುತ್ತಿದ್ದ ಇವರು ಮಣಿಪಾಲದ ವಿಧ್ಯಾರ್ಥಿಗಳು ಎನ್ನಲಾಗಿದೆ. ಕೊನೆಗೆ ಅಂಬುಲೆನ್ಸ್ ತರಿಸಿ ಅದಕ್ಕೂ ಹತ್ತಲು ನಿರಾಕರಿಸಿದಾಗ ಆಕ್ರೋಶಗೊಂಡ ಸಾರ್ವಜನಿಕರು ಪೊಲೀಸರೊಂದಿಗೆ ಸೇರಿ ಅವರನ್ನು ಅಂಬುಲೆನ್ಸ್ ಹತ್ತಿಸಿ ಮಣಿಪಾಲ ಕಡೆಗೆ ಸಾಗ ಹಾಕಿದ ಘಟನೆ ನಡೆಯಿತು.
PublicNext
08/01/2022 11:17 am