ಮಂಗಳೂರು: ಟಿವಿ ನೋಡಲೆಂದು ಬಂದು 10ರ ಬಾಲಕಿಗೆ ಯುವಕನೋರ್ವನು ಲೈಂಗಿಕ ಕಿರುಕುಳ ನೀಡಿರುವ ಘಟನೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಕಿಯ ನೆರೆ ಮನೆ ನಿವಾಸಿ ನಿತಿನ್ ರಿತಿನ್(19) ಎಂಬಾತನೇ ಲೈಂಗಿಕ ಕಿರುಕುಳ ನೀಡಿದಾತ.
ಬಾಲಕಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಯಿಂದ ಬಂದು ಪಕ್ಕದ ಮನೆಯ ಆರೋಪಿ ಮನೆಗೆ ಟಿವಿ ನೋಡಲೆಂದು ಹೋಗಿದ್ದಾಳೆ. ಆಗ ಆತ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದ ಬೆದರಿದ ಬಾಲಕಿ ಆಕೆಯ ಮನೆಗೆ ಓಡಿ ಹೋಗಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿ ನಿತಿನ್ ಬಾಲಕಿಯ ಮನೆಗೆ ಅಕ್ರಮ ಪ್ರವೇಶ ಮಾಡಿ ಈ ವಿಚಾರವನ್ನು ಯಾರಲ್ಲಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾನೆ.
ಈ ಘಟನೆ ಡಿ.24 ರಂದು ಸಂಜೆ 4.30ರ ಸಮಯಕ್ಕೆ ನಡೆದಿದ್ದು, ತಡವಾಗಿ ದೂರು ದಾಖಲಾಗಿತ್ತು. ಈ ಬಗ್ಗೆ ಪೊಕ್ಸೊ ಪ್ರಕರಣವನ್ನು ದಾಖಲಿಸಿರುವ ಉರ್ವ ಪೊಲೀಸರು, ಆರೋಪಿಯನ್ನು ನಿನ್ನೆ ದಸ್ತಗಿರಿ ಮಾಡಿದ್ದಾರೆ.
Kshetra Samachara
07/01/2022 08:55 am