ಕೋಟ: ಜಿಲ್ಲೆಯ ಕೋಟತಟ್ಟು ಗ್ರಾಮದ ಕೊರಗ ಕಾಲೊನಿಯಲ್ಲಿ ಕೊರಗ ಸಮುದಾಯದ ರಾಜೇಶ್ ಎಂಬವರ ಮನೆಯಲ್ಲಿ ಸೋಮವಾರ ಮೆಹೆಂದಿ ಕಾರ್ಯಕ್ರಮ ನಡೆಯುತ್ತಿದ್ದಾಗ ಕೋಟ ಪೊಲೀಸರು ದಾಳಿ ಮಾಡಿ ಅಲ್ಲಿದ್ದವರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ್ದರು. ಈ ಸಂಬಂಧ ನೊಂದ ರಾಜೇಶ್ ಪೊಲೀಸರ ಮೇಲೆ ದೂರು ನೀಡಿದ್ದು, ಮತ್ತೊಂದು ಕಡೆಯಿಂದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು, ಮೆಹೆಂದಿ ಕಾರ್ಯಕ್ರಮದಲ್ಲಿದ್ದವರು ಪೊಲೀಸರಿಗೆ ಹೊಡೆದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಪ್ರತಿದೂರು ನೀಡಿದ್ದಾರೆ!
ಪೊಲೀಸ್ ಲಾಠಿಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎಸ್ಸೈಯನ್ನು ಅಮಾನತು ಮಾಡಲಾಗಿದ್ದು, ಐವರು ಪೊಲೀಸರನ್ನು ಎತ್ತಂಗಡಿ ಮಾಡಲಾಗಿದೆ. ಇದೀಗ ಸಂತ್ರಸ್ತ ರಾಜೇಶ್ ಪೊಲೀಸರ ವಿರುದ್ಧ ದೂರು ದಾಖಲಿಸಿದ್ದು, ಕಾನ್ಸ್ ಟೇಬಲ್ ಕೂಡ ಮೆಹೆಂದಿ ಮನೆಯಲ್ಲಿದ್ದವರು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.
Kshetra Samachara
30/12/2021 08:43 pm