ಮುಲ್ಕಿ: ಮನೆ, ಮೊಬೈಲ್ ಅಂಗಡಿಗಳಲ್ಲಿ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿ,
ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಿನ್ನಿಗೋಳಿ ತಾಳಿಪಾಡಿ ಗ್ರಾಮದ ಕುದುಂಬಲಚ್ಚಿಲ್ ನಲ್ಲಿ ಆಗಸ್ಟ್ 21ರಂದು ಲತಾ ಪ್ರಭಾಸ್ ಅವರ ಮನೆ ಬೀಗ ಮುರಿದು 21 ಗ್ರಾಂ ಚಿನ್ನಾಭರಣ ಕಳವು ಮಾಡಿದ ಪ್ರಕರಣ ಹಾಗೂ ನ. 2ರಂದು ಹಳೆಯಂಗಡಿಯ ಶ್ರೀ ದುರ್ಗಾ ಭಗವತಿ ಮೊಬೈಲ್ ಅಂಗಡಿಯಿಂದ 5 ಮೊಬೈಲ್, 1 ಸಿಸಿ ಕ್ಯಾಮೆರಾ ಕಳವು ಮಾಡಿದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ದಾವಣಗೆರೆಯ ಪ್ರಸ್ತುತ ಸುರತ್ಕಲ್ ಇಡ್ಯಾ ಬಳಿ ರಿಯಾಜ್ ಶೇಖ್ ಎಂಬವರ ಬಾಡಿಗೆ ಮನೆಯಲ್ಲಿರುವ ಸಮೀರ್ ದಾದಾಪೀರ್ (19) ಹಾಗೂ ಹಾವೇರಿ ವಿದ್ಯಾನಗರ ಹೈಸ್ಕೂಲ್ ಗ್ರೌಂಡ್ ಬಳಿ ನಿವಾಸಿ ಈರಣ್ಣ ಶಿರೂರ್ ಯಾನೆ ಚೋಟು (21) ಎಂಬವರನ್ನು ಬಂಧಿಸಿ 21 ಗ್ರಾಂ ಚಿನ್ನಾಭರಣ, 5 ಮೊಬೈಲ್, ಸಿಸಿ ಕ್ಯಾಮೆರಾ ಸಹಿತ ಒಟ್ಟು 1,60,761 ಮೌಲ್ಯದ ಸೊತ್ತು ಸ್ವಾಧೀನಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮುಲ್ಕಿ ಪೊಲೀಸ್ ಪಿಐ ಕುಸುಮಾಧರ ನೇತೃತ್ವದಲ್ಲಿ ಪಿಎಸ್ ಐ ವಿನಾಯಕ ತೋರಗಲ್, ಪ್ರೊಬೆಷನರಿ ಪಿಎಸ್ಐ ಮಾರುತಿ ಪಿ., ಅಪರಾಧ ವಿಭಾಗ ಎಎಸ್ ಐ ಚಂದ್ರಶೇಖರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
Kshetra Samachara
22/12/2021 09:10 pm