ಉಡುಪಿ :ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಮನೋರೋಗಿ ಹಿರಿಯ ಮಹಿಳೆಯೋರ್ವರು ದೌರ್ಜನ್ಯಕ್ಕೊಳಗಾಗುತ್ತಿದ್ದ ವಿಷಯ ತಿಳಿದ ವಿಶು ಶೆಟ್ಟಿ ಅಂಬಲಪಾಡಿ,ಹಿರಿಯ ನಾಗರಿಕ ಸಹಾಯವಾಣಿಯ ಸಹಕಾರದೊಂದಿಗೆ ಮಂಜೇಶ್ವರದ ಸಾಯಿ ನಿಕೇತನ ಸೇವಾಶ್ರಮದಲ್ಲಿ ಆಶ್ರಯ ಕಲ್ಪಿಸಿದ ಘಟನೆ ನಡೆದಿದೆ.
ಹಿರಿಯ ಮಹಿಳೆಯು ಬೇಬಿ ಅಮೀನ್(62)(ಹೆಸರು ಬದಲಾಯಿಸಲಾಗಿದೆ) ಮನೋರೋಗಿಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಒಂಟಿಯಾಗಿ ರಾತ್ರಿಯ ಸಮಯದಲ್ಲಿ ಸುತ್ತಲಿನ ಪರಿಸರದಲ್ಲಿ ತಿರುಗಾಡುತ್ತಿದ್ದರು.
ಮಹಿಳೆಗೆ ದೌರ್ಜನ್ಯವಾಗುತ್ತಿರುವ ವಿಷಯ ಸಾರ್ವಜನಿಕರು ವಿಶು ಶೆಟ್ಟಿ ಹಾಗೂ ಹಿರಿಯ ನಾಗರಿಕ ಸಹಾಯವಾಣಿಗೆ ಮಾಹಿತಿ ನೀಡಿದ್ದರು. ವಿಶು ಶೆಟ್ಟಿಯವರು ಕೂಡಲೇ ಮಹಿಳೆಯ ಸಂಬಂಧಿಕರನ್ನು ಸಂಪರ್ಕಿಸಿ ಮಹಿಳೆಯನ್ನು ವಶಕ್ಕೆ ಪಡೆದು, ಮಂಜೇಶ್ವರದ ದೈಗೋಳಿ ಸಾಯಿ ನಿಕೇತನ ಸೇವಾಶ್ರಮದಲ್ಲಿ ಪುನರ್ವಸತಿಗೆ ವಿನಂತಿಸಿದರು. ವಿನಂತಿಗೆ ಸ್ಪಂದಿಸಿದ ಸಾಯಿ ನಿಕೇತನ ಸೇವಾಶ್ರಮದವರು ಮಹಿಳೆಗೆ ಆಶ್ರಯ ನೀಡಿದ್ದಾರೆ. ಮಹಿಳೆಯ ಸಂಬಂಧಿಕರು ಆಶ್ರಮಕ್ಕೆ ತಮ್ಮಿಂದಾದ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ.
Kshetra Samachara
22/12/2021 01:29 pm