ಮೂಡುಸಗ್ರಿ; ವಿಪರೀತ ಕುಡಿತದ ಚಟ ಹೊಂದಿದ್ದ ಯುವಕನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ತಾಲೂಕಿನ ಮೂಡುಸಗ್ರಿ ಎಂಬಲ್ಲಿ ನಡೆದಿದೆ.
ಮೂಡುಸಗ್ರಿಯ ಮುಕುಂದ ನಾಯ್ಕ್ ಅವರ ಮಗ ನವೀನ್ ನಾಯ್ಕ್ (32) ಆತ್ಮಹತ್ಯೆ ಮಾಡಿಕೊಂಡಾತ. ಈ ಯುವಕ
ಇಲ್ಲಿಯ ಖಾಸಗಿಯವರ ಹಾಡಿಯಲ್ಲಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತ ಆತ್ಮಹತ್ಯೆಗೈದು ಮೂರು ದಿನಗಳು ಕಳೆದಿರಬಹುದೆಂದು ಶಂಕಿಸಲಾಗಿದೆ.
ಮಣಿಪಾಲ ಠಾಣಾಧಿಕಾರಿ ಸುಧಾಕರ್ ಟಿ. ತೋನ್ಸೆ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ಸಹಕರಿಸಿದರು.
Kshetra Samachara
20/12/2021 12:25 pm