ಮಂಗಳೂರು: ನಗರದ ದೇರಳಕಟ್ಟೆಯ ಕಣಚೂರುಆಸ್ಪತ್ರೆಯಲ್ಲಿ ಎಂಬಿಬಿಎಸ್ ಇಂಟರ್ಶಿಪ್ ಮಾಡುತ್ತಿದ್ದ ವಿದ್ಯಾರ್ಥಿನಿ ನೇಣಿಗೆ ಶರಣಾದ ಘಟನೆ ಇಂದು ನಡೆದಿದೆ. ಬೀದರ್ ಜಿಲ್ಲೆಯ ಆನಂದನಗರ ಮೂಲದ ಎಂಬಿಬಿಎಸ್ ಇಂಟರ್ಶಿಪ್ ವಿದ್ಯಾರ್ಥಿನಿ ವೈಶಾಲಿ ಗಾಯಕ್ ವಾಡ್(25) ಮೃತಪಟ್ಟವರು.
ವೈಶಾಲಿ, ನಗರದ ಕುತ್ತಾರಿನ ಮಲ್ಲೂರಿನಲ್ಲಿ ತಾನು ವಾಸವಾಗಿರುವ ಸಿಲಿಕಾನಿಯಾ ಅಪಾರ್ಟ್ಮೆಂಟ್ ನ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅವರ ಮೃತದೇಹವನ್ನು ವೆನ್ಲಾಕ್ ಶವಾಗಾರಕ್ಕೆ ಸಾಗಿಸಲಾಗಿದೆ. ನಾಳೆ ಅವರ ಪೋಷಕರು ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
19/12/2021 10:50 pm