ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ: ಮಹಿಳಾ ಪೊಲೀಸರಿಗೆ ಹಲ್ಲೆ, ಕೊಲೆ ಬೆದರಿಕೆ; 10 ಪಿಎಫ್‌ಐ ಕಾರ್ಯಕರ್ತರ ವಿರುದ್ಧ ಕೇಸ್‌

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಪೊಲೀಸ್‌ ಠಾಣೆ ಮುಂಭಾಗ ನಡೆದ ಪ್ರತಿಭಟನೆಯ ವೇಳೆ 10 ಮಂದಿ ಪಿಎಫ್ ಐ ಕಾರ್ಯಕರ್ತರು ಇಬ್ಬರು ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿ, ಸಮವಸ್ತ್ರ ಹರಿದು ಮಾನಭಂಗಕ್ಕೆ ಯತ್ನಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಹಮ್ಮದ್ ತಾಹೀರ್, ಸಾದಿಕ್, ಅಬ್ದುಲ್ ಮುಬಾರಕ್, ಅಬುಲ್ ಶರೀನ್, ಮೊಹಮ್ಮದ್ ಜಾಹಿರ್, ಸುಜೀರ್ ಮಹಮ್ಮದ್‌ ಫೈಜಲ್, ಮೊಹಮ್ಮದ್ ಹನೀಫ್, ಎನ್. ಕಾಸಿಂ, ಮೊಹಮ್ಮದ್ ಆಸಿಫ್ ಹಾಗೂ ತುಫೈಲ್ ಮಹಮ್ಮದ್ ಕೆ. ಎಂಬವರ ವಿರುದ್ಧ ದೂರು ದಾಖಲಾಗಿದೆ.

ಇವರೆಲ್ಲ ಠಾಣೆ ಮುಂಭಾಗ ಅಕ್ರಮ ಕೂಟ ರಚಿಸಿ, ಠಾಣೆಗೆ ಕಲ್ಲು ಬಿಸಾಡಿ ಠಾಣೆಯ ಮುಂಭಾಗದ ಗಾಜುಗಳನ್ನು ಪುಡಿ ಮಾಡಿದ್ದಾರೆ ಹಾಗೂ ಠಾಣೆ ಎದುರು ನಿಲ್ಲಿಸಿದ ಇಲಾಖೆಯ ವಾಹನಗಳನ್ನು ಜಖಂಗೊಳಿಸಿ ಸರ್ಕಾರಿ ಸೊತ್ತುಗಳಿಗೆ ನಷ್ಟವುಂಟು ಮಾಡಿದ್ದಾರೆಂದು ಉಪ್ಪಿನಂಗಡಿ ಪಿಎಸ್‌ ಐ ದೂರಿನಲ್ಲಿ ತಿಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

17/12/2021 10:56 am

Cinque Terre

12.09 K

Cinque Terre

6

ಸಂಬಂಧಿತ ಸುದ್ದಿ