ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಲ್ಲಿನ ಕೋರೆಯಲ್ಲಿ ಡೈನಮೆಟ್ ಇಟ್ಟು ಸ್ಪೋಟ; ಇಬ್ಬರಿಗೆ ಗಾಯ;ಮನೆಗಳಿಗೆ ಹಾನಿ

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೆಎಸ್ ರಾವ್ ನಗರದ ಆಶ್ರಯ ಕಾಲೋನಿ ಬಳಿಯ ಕೊಲ್ನಾಡು ಕೈಗಾರಿಕಾ ಪ್ರದೇಶದ ಸೈಟ್ ನ ಕಲ್ಲಿನ ಕೋರೆಯಲ್ಲಿ ಬಂಡೆಗಲ್ಲಿಗೆ ಕೆಲಸಗಾರರು ಡೈನಮೆಟ್ ಸ್ಪೋಟಿಸುವಾಗ ಸ್ಥಳೀಯ ಮನೆಗಳಿಗೆ ಹಾನಿಯಾಗಿದ್ದು ಇಬ್ಬರು ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಸ್ಥಳೀಯ ಆಶ್ರಯ ಕಾಲೋನಿ ನಿವಾಸಿಗಳಾದ ಫೌಜಿಯಾ, ಮಾದೇವಿ ಎಂದು ಗುರುತಿಸಲಾಗಿದೆ

ಭಾನುವಾರ ಮುಂಜಾನೆ 11 ಗಂಟೆ ವೇಳೆಗೆ ಆಶ್ರಯ ಕಾಲೋನಿಯ ಬಳಿ ಕೈಗಾರಿಕಾ ಪ್ರದೇಶದ ಸೈಟ್ ನಲ್ಲಿರುವ ಕಲ್ಲಿನ ಕೋರೆಯಲ್ಲಿ ಮೂಡಬಿದ್ರೆ ನಿವಾಸಿ ಗುತ್ತಿಗೆದಾರ ಬಾಬು ಎಂಬವರ ಮೂವರು ಕೆಲಸಗಾರರು ಬಂಡೆ ಕಲ್ಲು ತೆಗೆಯಲು ಡೈನಮೆಟ್ ನಿಂದ ಸ್ಪೋಟಿಸಿದ್ದು ಪರಿಸರದಲ್ಲಿ ಭಾರೀ ಶಬ್ದ ಉಂಟಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಸ್ಪೋಟದ ತೀವ್ರತೆಗೆ ಸುಮಾರು ಅರ್ಧ ಕಿಮೀ ಪರಿಸರದ ಸುಜಾತ, ಫೌಜಿಯ, ಪುಷ್ಪ, ಮೈಮುನ, ರೆಹನಾ ಮತ್ತಿತರ ಮನೆಗಳಿಗೆ ಹಾನಿಯಾಗಿದ್ದು ಇಬ್ಬರು ಗಾಯಗೊಂಡಿದ್ದಾರೆ.

ಏಕಾಏಕಿ ನಡೆದ ಸ್ಫೋಟದಿಂದ ಸ್ಥಳದಲ್ಲಿ ಭಯಭೀತ ವಾತಾವರಣ ಉಂಟಾಗಿದ್ದು ಸ್ಥಳಕ್ಕೆ ಮುಲ್ಕಿ ನಪಂ ಸದಸ್ಯ ಶೈಲೇಶ್, ಮಾಜಿ ಸದಸ್ಯ ಬಶೀರ್ ಕುಳಾಯಿ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸ್ಫೋಟ ಸಂಭವಿಸಿ ಹಾನಿಯಾದ ಬಳಿಕ ಸ್ಥಳಕ್ಕೆ ಕಲ್ಲಿನ ಕೋರೆಯ ಗುತ್ತಿಗೆದಾರರು ಆಗಮಿಸಿದ್ದು ಆಶ್ರಯ ಕಾಲೋನಿ ನಾಗರಿಕರು ಅವರನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಸಂದರ್ಭ ಕಲ್ಲಿನ ಕೋರೆ ಗುತ್ತಿಗೆದಾರರು ಕ್ಷಮಾಪಣೆ ಕೇಳಿದ್ದು ಹಾನಿ ಸಂಬಂಧ ಪರಿಹಾರ ವಿತರಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Edited By : Shivu K
Kshetra Samachara

Kshetra Samachara

12/12/2021 04:27 pm

Cinque Terre

23.14 K

Cinque Terre

1

ಸಂಬಂಧಿತ ಸುದ್ದಿ