ಮಂಗಳೂರು: ನಗರದ ಹೃದಯ ಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದ ಬಳಿ ಮಂಗಳೂರಿನಿಂದ ಉಡುಪಿಗೆ ತೆರಳಲು ಬಸ್ಸಿನಲ್ಲಿ ಕುಳಿತಿದ್ದ ಸಹಪಾಠಿಗಳಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಎನ್ನಲಾದ ಯುವಕರು ಧಮ್ಕಿ ಹಾಕಿದ ಘಟನೆ ನಡೆದಿದೆ.
ಯುವತಿಯನ್ನು ನಿಂದಿಸಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವಕ ಶಿವಮೊಗ್ಗ ಮೂಲದವನಾಗಿದ್ದು, ಯುವತಿ ಉಡುಪಿಯವರು ಎಂದು ಗುರುತಿಸಲಾಗಿದೆ. ಇಬ್ಬರೂ ಮಂಗಳೂರಿನ ವಾಮಂಜೂರಿನ ಖಾಸಗಿ ಕಾಲೇಜ್ ನ ಸಹಪಾಠಿಗಳಾಗಿದ್ದು, ಇಬ್ಬರು ಉಡುಪಿಗೆ ತೆರಳುವ ಬಸ್ಸಿನಲ್ಲಿ ಕುಳಿತಿದ್ದರು.
ಇದನ್ನು ಗಮನಿಸಿ ಬಸ್ಸಿನ ಒಳಗೆ ಬಂದ ಸಂಘ ಪರಿವಾರಕ್ಕೆ ಸೇರಿದ ಬಸ್ ನಿರ್ವಾಹಕ ಮತ್ತಿತರ ಕಾರ್ಯಕರ್ತರು ಯುವಕನ ಮೇಲೆ ಹಲ್ಲೆ ನಡೆಸಿ ವಿದ್ಯಾರ್ಥಿನಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಯುವಕನ ಐಡಿ ಹಾಗೂ ವಿಳಾಸವನ್ನು ಕೇಳಿ ಧಮ್ಕಿ ಹಾಕುವ ವೀಡಿಯೊ ವೈರಲ್ ಆಗಿದೆ.
Kshetra Samachara
10/12/2021 09:55 pm