ಕಾಪು: ಕಟಪಾಡಿ ಏಣಗುಡ್ಡೆ ಗ್ರಾಮದ ಮುಸ್ಲಿಂ ಮಹಿಳೆಯ ಮನೆಗೆ ಬಂದ ಮೂವರು ನಕಲಿ ಫಕೀರರು ಮಹಿಳೆ ಮೇಲೆ ಧೂಪ ಮಿಶ್ರಿತ ಹೊಗೆ ಪ್ರಯೋಗಿಸಿ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದಾರೆ.
ನಿನ್ನೆ ಕಟಪಾಡಿಯ ಮನೆಗೆ ತೆರಳಿದ ಈ 'ವೇಷಧಾರಿ'ಗಳು ಮನೆ ಸುತ್ತಲೂ ಅಡ್ಡಾಡಿ ತಮ್ಮ ಹಾಡಿನ ಮೂಲಕ ಮನೆಯವರು ಹೊರಬರುವಂತೆ ಮಾಡಿದ್ದಾರೆ. ಬಳಿಕ ಹೊರ ಬಂದ ಮಹಿಳೆಯ ಮೇಲೆ ಬೂದಿ ಮಿಶ್ರಿತ ಹೊಗೆ ಪ್ರಯೋಗಿಸಿದ್ದಾರೆ. ಈ ಸಂದರ್ಭ ಮಹಿಳೆ ತನ್ನ ಮೈಮೇಲಿನ ಚಿನ್ನಾಭರಣ ಮತ್ತು ಮನೆಯೊಳಗಿನಿಂದ ನಗದನ್ನು ತಂದು ಕೊಟ್ಟು ಫಕೀರರ ಜೋಳಿಗೆ ತುಂಬಿಸಿದ್ದಾರೆ!
ಚಿನ್ನಾಭರಣ, ಹಣ ಪಡೆದ ನಂತರ ಫಕೀರರು ಕಾಲ್ಕಿತ್ತಿದ್ದು, ಮಹಿಳೆ ಮಂಪರಿನಿಂದ ಎಚ್ಚರಗೊಂಡಾಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಆದರೆ, ಕಾಲ ಮಿಂಚಿ ಹೋಗಿತ್ತು.
ವಂಚಕರು ಮನೆಯಂಗಳದಲ್ಲಿ ಹಾಗೂ ಪೇಟೆಯಲ್ಲಿ ನಡೆದಾಡಿದ ಫೂಟೇಜ್ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೊ ವೈರಲ್ ಆಗುತ್ತಿವೆ.
Kshetra Samachara
10/12/2021 01:53 pm