ಕಾರ್ಕಳ : ಕಾರ್ಕಳದ ಕುಂಟಾಡಿ ಅಪಾರ್ಟ್ ಮೆಂಟ್ ವೊಂದರಲ್ಲಿ ಬೆಂಕಿ ತಗುಲಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಸದ್ಯ ಮೃತ ಮಹಿಳೆಯನ್ನು ಗೀತಾ (68) ಎಂದು ಗುರುತಿಸಲಾಗಿದ್ದು ,ಈ ಸಾವು ಹೊಸ ತಿರುವು ಪಡೆದುಕೊಂಡಿದೆ.ತಾಯಿಯ ಸಾವಿಗೆ ಸಂಬಂಧಿಸಿದಂತೆ ತಂದೆಯ ವಿರುದ್ಧ ಮಗಳು ದೂರು ನೀಡಿದ್ದಾಳೆ.
ಮೃತ ಮಹಿಳೆಯ ಪುತ್ರಿ ಧನಶ್ರೀ ಕುಡ್ವ ಮೂಡುಬಿದಿರೆಯಲ್ಲಿ ಪತಿಯ ಮನೆಯಲ್ಲಿ ವಾಸವಾಗಿದ್ದಾರೆ. ತಂದೆ ಸುರೇಂದ್ರ ಕುಡ್ವ (70) ಮತ್ತು ತಾಯಿ ಗೀತಾ ಅವರು ಕಾರ್ಕಳ ಕುಂಟಲ್ವಾಡಿಯ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಡಿ. 6 ರಂದು ಹತ್ತಿರದ ಫ್ಲಾಟ್ ನವರು ಧನಶ್ರೀಗೆ ಫೋನ್ ಮಾಡಿ ತಾಯಿಗೆ ಬೆಂಕಿಯಿಂದ ಸುಟ್ಟ ಗಾಯಗಳಾಗಿರುವುದಾಗಿ ತಿಳಿಸಿದ್ದರು. ನಂತರ ಫ್ಲ್ಯಾಟ್ ನಲ್ಲಿದ್ದವರು ಆಸ್ಪತ್ರೆಗೆ ಸೇರಿಸಿದ್ದಾರೆ.
ಆಸ್ಪತ್ರೆಗೆ ಧಾವಿಸಿದ ಪುತ್ರಿ ತಾಯಿಯಲ್ಲಿ ಘಟನೆ ಕುರಿತು ವಿಚಾರಿಸಿದ್ದಾರೆ. ಇಡೀ ದೇಹದಲ್ಲಿ ಸುಟ್ಟ ಗಾಯಗಳಾಗಿದ್ದು, ಕಾರ್ಕಳ ಆಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೇ ಡಿ. 7ರಂದು ಗೀತಾ ಮೃತಪಟ್ಟಿದ್ದಾರೆ.
ಇನ್ನು ತಾಯಿ ಮೃತಪಡುತ್ತಿದ್ದಂತೆ ಮಗಳು ತಾಯಿಯ ಸಾವಿನ ಬಗ್ಗೆ ಅನುಮಾನವಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಬೆಂಕಿಯಲ್ಲಿ ತನ್ನ ತಾಯಿ ಸುಡುತ್ತಿದ್ದರು ನೋಡಿಯೂ ತಂದೆ ಏನೂ ಮಾಡದೆ ಹಾಗೆಯೇ ನಿಂತಿದ್ದರು ಎಂದು ಫ್ಲ್ಯಾಟ್ ನ ಇತರ ಮನೆಯವರು ಹೇಳಿದ್ದಾರೆ. ಹಾಗಾಗಿ ತಾಯಿಯ ಸಾವಿನಲ್ಲಿ ಅನುಮಾನ ಇರುವುದಾಗಿ ತಿಳಿಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
08/12/2021 03:00 pm