ಮಂಗಳೂರು: ಮೋರ್ಗನ್ಸ್ ಗೇಟ್ ನಲ್ಲಿ ʼಇಬ್ಬರು ಮಕ್ಕಳ ಸಹಿತ ದಂಪತಿ ಆತ್ಮಹತ್ಯೆʼ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಚಾಲಕ ನಾಗೇಶ್ ಅವರ ಪತ್ನಿ ವಿಜಯಲಕ್ಷ್ಮಿ ಮುಸ್ಲಿಂ ಆಗಿ ಮತಾಂತರವಾಗಿರುವ ಶಂಕೆ ವ್ಯಕ್ತವಾಗಿದೆ. ಮತಾಂತರ ವಿಚಾರದಲ್ಲಿ ಗಂಡ - ಹೆಂಡತಿ ಮಧ್ಯೆ ಜಗಳ ಆಗಿತ್ತು ಎಂಬ ಮಾಹಿತಿ ಸಿಕ್ಕಿದೆ.
ನೂರ್ ಜಹಾನ್ ಎಂಬ ಮಹಿಳೆಯ ಮನೆಗೆ ಕೆಲಸಕ್ಕೆ ಹೋಗುತ್ತಿದ್ದ ವಿಜಯಲಕ್ಷ್ಮಿ ಮತಾಂತರಗೊಳ್ಳಲು ಯತ್ನ ನಡೆದಿದೆ. ಮಂಗಳೂರಿನ ಬಿಜೈ ನಿವಾಸಿಯಾಗಿರುವ ನೂರ್ ಜಹಾನ್ ಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಅಕ್ಟೋಬರ್ ನಲ್ಲಿ ಮನೆ ಬಿಟ್ಟು ಹೋಗಿದ್ದ ವಿಜಯಲಕ್ಷ್ಮಿ ಬಗ್ಗೆ ಪಾಂಡೇಶ್ವರ ಠಾಣೆಯಲ್ಲ ಮಿಸ್ಸಿಂಗ್ ದೂರು ದಾಖಲಾಗಿತ್ತು. ನಾಗೇಶ್ -ವಿಜಯಲಕ್ಷ್ಮಿ ಹೆಚ್ಚಾಗಿ ನೂರ್ ಜಹಾನ್ ಮನೆಯಲ್ಲೇ ಇರುತ್ತಿದ್ದರು ಎನ್ನಲಾಗಿದೆ. ಡೆತ್ ನೋಟ್ ನಲ್ಲಿ ಮತಾಂತರ ಆಗಿರುವ ಬಗ್ಗೆ ಮಾಹಿತಿಯನ್ನು ನಾಗೇಶ್ ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ಮನೆ ಬದಲಿಸಿ ಮೋರ್ಗನ್ಸ್ ಗೇಟ್ ಬಳಿ ದಂಪತಿ ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದರು. ನಿನ್ನೆ ರಾತ್ರಿ ಫ್ರೈಡ್ ರೈಸಲ್ಲಿ ವಿಷ ಬೆರೆಸಿ ಪತ್ನಿ, ಮಕ್ಕಳಿಗೆ ಕೊಟ್ಟು ನಾಗೇಶ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಬಗ್ಗೆ ದಂಪತಿ ಮಧ್ಯೆ ಕಲಹ ಆಗಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಲ್ಲಿ ನೂರ್ ಜಹಾನ್ ಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಡೀ ಕುಟುಂಬದ ಆತ್ಮಹತ್ಯೆ ಪ್ರಕರಣದ ಬಗ್ಗೆ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
Kshetra Samachara
08/12/2021 02:17 pm