ಬೈಂದೂರು: ಬೈಂದೂರು ತಾಲೂಕಿನ ಶಿರೂರು ಟೋಲ್ ಸಿಬ್ಬಂದಿ ಅಪಘಾತದಿಂದ ಮೃತಪಟ್ಟ ಗೋವುಗಳನ್ನು ಟೋಯಿಂಗ್ ವಾಹನಕ್ಕೆ ಕಟ್ಟಿ ದರದರನೆ ಹೆದ್ದಾರಿಯಲ್ಲಿ ಎಳೆದೊಯ್ದಿದ್ದು, ಇದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಹೀಗೆ ಅಮಾನವೀಯವಾಗಿ ಎಳೆದೊಯ್ದ ವೀಡಿಯೊ ಕೂಡ ವೈರಲ್ ಆಗಿದೆ.
ಉಡುಪಿ ಜಿಲ್ಲೆಯ ಶಿರೂರು ಟೋಲ್ ಪ್ಲಾಜಾದಿಂದ ಎರಡು ಮೃತಪಟ್ಟ ಜಾನುವಾರುಗಳ ಕಳೇಬರವನ್ನು ಟೋಯಿಂಗ್ ವಾಹನಕ್ಕೆ ಕಟ್ಟಿ 2-3 ಕಿ.ಮೀ. ದೂರದ ವರೆಗೆ ರಸ್ತೆಯಲ್ಲಿ ಎಳೆದು ತರಲಾಗಿದೆ!
ವಾಹನ ಸವಾರರೊಬ್ಬರು ಈ ದೃಶ್ಯವನ್ನು ವೀಡಿಯೊ ಮಾಡಿ ಶೇರ್ ಮಾಡಿದ್ದಾರೆ. ಹಿಂದೂ ಜಾಗರಣ ವೇದಿಕೆ, ಭಜರಂಗದಳ, ವಿಶ್ವಹಿಂದೂ ಪರಿಷತ್ ಸಹಿತ ಹಿಂದೂಪರ ಸಂಘಟನೆಗಳು ಈ ಕುಕೃತ್ಯವನ್ನು ಖಂಡಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿವೆ. ಮಾತ್ರವಲ್ಲ, ಇವತ್ತು ಪ್ರತಿಭಟನೆ ನಡೆಸುವುದಾಗಿಯೂ ಹೇಳಿವೆ.
Kshetra Samachara
06/12/2021 09:28 am