ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಪರವಾನಿಗೆ ಇಲ್ಲದೆ ನಾಡಕೋವಿ ತಂದಿದ್ದ ಯುವಕನ ಬಂಧನ

ಬಜಪೆ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಏರಿಯಾಕ್ಕೆ ಪರವಾನಿಗೆ ಇಲ್ಲದ ನಾಡಕೋವಿಯನ್ನು ತಂದಿದ್ದ ಯುವಕನೋರ್ವನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ಹಾವಂಜೆಯ ರೊನಾಲ್ಡ್ ಡಿಸೋಜ (24) ಬಂಧಿತ ಯುವಕ. ಏರ್ ಇಂಡಿಯಾ ವಿಮಾನದಲ್ಲಿ ಕುವೈತ್ ನಿಂದ ಬರುತ್ತಿರುವ ತನ್ನ ಸಂಬಂಧಿಕರನ್ನು ಕರೆದುಕೊಂಡು ಹೋಗಲು ರೊನಾಲ್ಡ್ ಡಿಸೋಜ ಮಂಗಳೂರಿನ ಏರ್ ಪೋರ್ಟ್ ಗೆ ಬಂದಿದ್ದು, ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿದ್ದರು.

ಈ ವೇಳೆ ವಿಮಾನ ನಿಲ್ದಾಣದ ಸಿಐಎಸ್‌ಎಫ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.ಪರಿಶೀಲನೆಯ ವೇಳೆ ಕಾರಿನಲ್ಲಿ ಪರವಾನಿಗೆ ಇಲ್ಲದ ಎರಡುನಾಡಕೋವಿಗಳು ಪತ್ತೆಯಾಗಿದ್ದವು.

ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

04/12/2021 12:02 pm

Cinque Terre

20.25 K

Cinque Terre

0

ಸಂಬಂಧಿತ ಸುದ್ದಿ