ಮಣಿಪಾಲ: ಗಾಂಜಾ ಸೇವಿಸಿದ ಪ್ರಕರಣಕ್ಜೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಶ್ರೇಯಸ್, ಪೆಮಿಸ್ಟನ್, ಚೈತನ್ಯ.ಎಸ್.ಕುಂದರ್, ಮತ್ತು ಮೊಹಮ್ಮದ್ ಅಬ್ದುಲ್ ರಜಾಕ್ ವಶಕ್ಕೆ ಪಡೆದ ಆರೋಪಿಗಳು.
ನ.24 ರಂದು ಮಣಿಪಾಲ ಠಾಣೆಯ ಎ.ಎಸ್.ಐ ಶೀನ ಸಾಲಿಯಾನ್ ,ಪಿ.ಎಸ್.ಐ ವಿನಯ್, ಸಿಬ್ಬಂದಿ ಸಂಗಮೇಶ್ ಮತ್ತು ಅಣ್ಣಪ್ಪ ಅವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಗಾಂಜಾ ಸೇವಿಸಿರುವ ಬಗ್ಗೆ ಅನುಮಾನಗೊಂಡು ಶ್ರೇಯಸ್, ಪೆಮಿಸ್ಟನ್, ಚೈತನ್ಯ.ಎಸ್.ಕುಂದರ್ ಮತ್ತು ಮೊಹಮ್ಮದ್ ಅಬ್ದುಲ್ ರಜಾಕ್ ಎಂಬ ನಾಲ್ವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.
ವೈದ್ಯರು ನೀಡಿದ ಪರೀಕ್ಷಾ ವರದಿಯಲ್ಲಿ ಈ ನಾಲ್ವರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೆತ್ತಿಕೊಳ್ಳಲಾಗಿದೆ.
Kshetra Samachara
02/12/2021 01:41 pm