ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪೂಜೆ ನೆಪದಲ್ಲಿ ಮಹಿಳೆಗೆ ವಂಚನೆ; ಕರಿಮಣಿ ಸರ ಲಪಟಾಯಿಸಿದ ಜ್ಯೋತಿಷಿ

ಮಂಗಳೂರು: ದೋಷ ಕಳೆಯುವೆನೆಂದು ಹೇಳಿ ಪೂಜೆಯ ನೆಪದಲ್ಲಿ ಜ್ಯೋತಿಷಿಯೋರ್ವ ಮಹಿಳೆಯ ಚಿನ್ನದ ಕರಿಮಣಿ ಸರವನ್ನು ಹಿಂದಿರುಗಿಸದೆ ವಂಚನೆಗೈದ ಬಗ್ಗೆ ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ಸಂಕಷ್ಟವಿದೆಯೆಂದು ಮಹಿಳೆ ಅ.13ರಂದು ನಗರದ ಕುಂಜತ್ತ್ ಬೈಲ್‌ನಲ್ಲಿರುವ ಜ್ಯೋತಿಷಿ ವಿನೋದ್ ಪೂಜಾರಿ ಎಂಬಾತನ ಬಳಿ ಹೋಗಿದ್ದರು. 'ನಿಮಗೆ ಬಹಳ ದೋಷ ಕಾಡುತ್ತಿದ್ದು, ಆ ದೋಷ ಕಳೆಯಲೆಂದು ಪೂಜೆ ಮಾಡಿಸಿಕೊಡುತ್ತೇನೆ' ಎಂದು ಹೇಳಿದ್ದಾನೆ. ಅದಕ್ಕಾಗಿ ಪೂಜೆಯ ಸಮಯದಲ್ಲಿ ಕಲಶಕ್ಕೆ ಇಡಲು ಚಿನ್ನದ ಆಭರಣ ತರಬೇಕು ಎಂದು ಜ್ಯೋತಿಷಿ ನಂಬಿಸಿದ್ದಾನೆ.

ಅದರಂತೆ ಮಹಿಳೆ ಐದೂವರೆ ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು‌ ಆತನಿಗೆ ನೀಡಿದ್ದಾರೆ. ಮಹಿಳೆ ನೀಡಿರುವ ಕರಿಮಣಿ ಸರವನ್ನು 15 ದಿನಗಳ ಕಾಲ ಪೂಜೆ ಮಾಡಿ ವಾಪಸ್​​ ನೀಡುವುದಾಗಿ ವಿನೋದ್ ಪೂಜಾರಿ ತಿಳಿಸಿದ್ದ. ಆದರೆ, ಸರವನ್ನು ಆತ ವಾಪಸ್​​ ನೀಡದೆ ತಲೆಮರೆಸಿಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಾವೂರು ಠಾಣೆಗೆ ಮಹಿಳೆ ದೂರು ನೀಡಿದ್ದು, ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

01/12/2021 05:47 pm

Cinque Terre

13.99 K

Cinque Terre

0