ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಡಪದವು:ಅಪಘಾತ - ಪರಾರಿಯಾಗಿದ್ದ ಕಾರು ಪತ್ತೆ - ಚಾಲಕನ ಬಂಧನ

ಬಜಪೆ:ಎಡಪದವು ಎಂಬಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಭಾನುವಾರದಂದು ಓಮ್ನಿ ಕಾರೊಂದು ಡಿಕ್ಕಿಯಾಗಿತ್ತು.ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದರು.ಘಟನೆಯಲ್ಲಿ ಎಡಪದವು ಪದ್ರೆಂಗಿ ನಿವಾಸಿ ಅರುಣ್ ಅಡ್ಯಂತಾಯ(40)ಮೃತಪಟ್ಟವರು.ಘಟನೆಯ ಬಳಿಕ ಒಮ್ನಿ ಕಾರು ಸಹಿತ ಚಾಲಕನು ಪರಾರಿಯಾಗಿದ್ದನು.

ಅಪಘಾತದ ದೃಶ್ಯವು ಸಿಸಿ ಟಿವಿಯಲ್ಲಿ ದಾಖಲಾಗಿತ್ತು.ತನಿಖೆ ನಡೆಸಿದ ಬಜಪೆ ಪೊಲೀಸರು ಕಾರನ್ನು ಬೈಕಂಪಾಡಿಯಿಂದ ವಶಪಡಿಸಿಕೊಂಡಿದ್ದು,ಕಾರು ಚಾಲಕ ವಾಮಂಜೂರು ನಿವಾಸಿ ರಿಕೊಡನಲ್ ರಾಚೆಲ್ ಬಾಬು (19)ನ ನ್ನು ಬಂಧಿಸಿದ್ದಾರೆ.ಕಾರು ಬೈಕಂಪಾಡಿ ಕೈಗಾರಿಕಾ ವಲಯದ ಸ್ಟೀಲ್ ಕಾರ್ಖಾನೆಯೊಂದಕ್ಕೆ ಸೇರಿದ್ದಾಗಿದೆ ಎನ್ನಲಾಗಿದೆ.

Edited By : Nirmala Aralikatti
Kshetra Samachara

Kshetra Samachara

30/11/2021 08:28 pm

Cinque Terre

9.49 K

Cinque Terre

1

ಸಂಬಂಧಿತ ಸುದ್ದಿ