ಬಜಪೆ:ವ್ಯಕ್ತಿಯೊಬ್ಬರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ನಾರಾಯಣ ಕೋಟ್ಯಾನ್ ಎಂದು ಗುರುತಿಸಲಾಗಿದ್ದು,ಕದ್ರಿಯ ಕ್ಯಾಟರಿಂಗ್ ಒಂದರಲ್ಲಿ ಕೆಲಸಮಾಡುತ್ತಿದ್ದರು. ಶಕ್ತಿನಗರದ ರಿಕ್ಷಾ ಚಾಲಕ ಜಗದೀಶ್ ಮತ್ತು ಕೊಟ್ಯಾನ್ ನ ರ ನಡುವೆ ಜಗಳ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಠಾಣೆಯಲ್ಲಿ ದೂರಿಕೊಂಡಿದ್ದರೂ ಪೊಲೀಸರು ತನ್ನ ಮೇಲೆಯೇ ದೂರು ದಾಖಲಿಸಿದ್ದಾರೆ. ಆರೋಪಿ ಜಗದೀಶ್ ರನ್ನು ಠಾಣೆಗೆ ಕರೆಸಿಕೊಳ್ಳುವಲ್ಲಿ ವಿಫಲರಾಗಿರುವ ಪೊಲೀಸರು ನನ್ನ ವಿರುದ್ದವೇ ದೂರು ದಾಖಲಿಸಿದ್ದಾರೆ.ಘಟನೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದೇನೆ ಎಂದು ಕೋಟ್ಯಾನ್ ಹೇಳಿದ್ದಾರೆ.
ತನಗಾದ ಅನ್ಯಾಯದ ಬಗ್ಗೆ ಹಿಂದೂ ಮುಖಂಡರಾದ ಶರಣ್ ಪಂಪ್ವೆಲ್ ಅವರಲ್ಲಿ ದೂರಿಕೊಂಡಿದ್ದು, ಗುರುಪುರದ ಹಿಂದೂ ಮುಖಂಡರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಬಜಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.
Kshetra Samachara
25/11/2021 04:09 pm