ಉಡುಪಿ: ನಗರದ ಜ್ಯುವೆಲ್ಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯೊಬ್ಬರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನ.23 ರಂದು ಸಂಜೆ ವೇಳೆ ನಗರದ ಸುಲ್ತಾನ್ ಡೈಮಂಡ್ ಗೋಲ್ಡ್ ಜುವೆಲ್ಲರಿ ಅಂಗಡಿಗೆ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ಬಂದಿದ್ದು, ಸೇಲ್ಸ್ ಮನ್ ಬಳಿ ಚಿನ್ನದ ಬಳೆಗಳನ್ನು ತೋರಿಸುವಂತೆ ಹೇಳಿದ್ದರು.
ಬೇರೆ ಬೇರೆ ಬಳೆಗಳನ್ನು ನೋಡುತ್ತಿದ್ದ ಮಹಿಳೆಯರು ಸೇಲ್ಸ್‌ಮೆನ್ ಗಮನವನ್ನು ಬೇರೆಡೆಗೆ ಸೆಳೆದು ಒಟ್ಟು 60 ಗ್ರಾಂ ತೂಕದ 4 ಚಿನ್ನದ ಬಳೆಗಳನ್ನು ಮೋಸದಿಂದ ತೆಗೆದುಕೊಂಡು ಹೋಗಿದ್ದಾರೆ. ಇದರ ಒಟ್ಟು ಮೌಲ್ಯ 3,00,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Kshetra Samachara
25/11/2021 11:51 am