ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪುರಭವನದಲ್ಲಿ ನ.25ರಂದು ಕಳವಿನ ಸೊತ್ತು ಮರಳಿಸುವ ಕಾರ್ಯಕ್ರಮ

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ನ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳವುಗೈದ ಸೊತ್ತು ಮರಳಿಸುವ ಕಾರ್ಯಕ್ರಮ ಪೊಲೀಸ್, ತುರ್ತು ಸೇವಾ ಘಟಕಗಳ ಪ್ರದರ್ಶನ ನ.25ರಂದು ಬೆಳಗ್ಗೆ 11ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ.

ಕಳವುಗೈದ ಬೆಲೆಬಾಳುವ ಸೊತ್ತುಗಳಾದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳು, ಮೊಬೈಲ್ ಗಳು, ಪೂಜಾ ಸಾಮಾಗ್ರಿಗಳು ಮತ್ತು ಲಕ್ಷಾಂತರ ರೂ. ನಗದನ್ನು ವಾರಸುದಾರರಿಗೆ ಮರಳಿ ಒಪ್ಪಿಸಲಾಗುತ್ತದೆ. ಅದೇ ರೀತಿ ಸೈಬರ್ ಪೊಲೀಸ್ ಠಾಣೆ ಯಾವ ರೀತಿ ಕರ್ತವ್ಯ ನಿರ್ವಹಿಸುತ್ತಿದೆ ಎಂಬ ವಿಚಾರವನ್ನು ಪ್ರದರ್ಶಿಸಲಾಗುತ್ತದೆ.

ಅದೇ ರೀತಿ ಸಂಚಾರಿ ಪೊಲೀಸ್ ಠಾಣೆಯ ವಿಚಾರ, ಸಂಚಾರಿ ನಿಯಮಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಫೊರೆನ್ಸಿಕ್ ಸೈನ್ಸ್ ಲ್ಯಾಬ್ ತೆರೆಯಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ಅಗತ್ಯ ಮಾಹಿತಿ ನೀಡಲಾಗುತ್ತದೆ. ಪ್ರಕೃತಿ ವಿಕೋಪಗಳ ಸಂದರ್ಭ ಪೊಲೀಸ್ ಇಲಾಖೆ ಯಾವ ರೀತಿ ಕರ್ತವ್ಯ ನಿರ್ವಹಿಸುತ್ತದೆ ಎಂಬ ಮಾಹಿತಿಯನ್ನು ಒದಗಿಸಲಾಗುತ್ತದೆ. ಬೆಳಗ್ಗಿನಿಂದ ಸಂಜೆವರೆಗೆ ಕಾರ್ಯಕ್ರಮ, ಪ್ರದರ್ಶನ ಇರಲಿದ್ದು, ವಿದ್ಯಾರ್ಥಿಗಳು, ನಾಗರಿಕರು, ಶಿಕ್ಷಕರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬಹುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಹೇಳಿದರು.

Edited By : Shivu K
Kshetra Samachara

Kshetra Samachara

24/11/2021 09:25 pm

Cinque Terre

27.58 K

Cinque Terre

1

ಸಂಬಂಧಿತ ಸುದ್ದಿ