ಬಂಟ್ವಾಳ: ಫೇಸ್ಬುಕ್ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ, ಫೋಟೋ ಅಪ್ಲೋಡ್ ಮಾಡಿದ ಬಂಟ್ವಾಳ ತಾಲೂಕಿನ ವ್ಯಕ್ತಿಯೋರ್ವನ ವಿರುದ್ಧ ಕೇಸ್ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಬೊಳ್ಳಾಯಿ ನಿವಾಸಿ ಮಹಮ್ಮದ್ ಲತೀಫ್ ಕೃತ್ಯ ಎಸಗಿದ ಆರೋಪಿ. ಮಹಮ್ಮದ್ ಲತೀಫ್ ವಿರುದ್ಧ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಟಿ ಆ್ಯಕ್ಟ್ ನಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
24/11/2021 02:09 pm