ಸುರತ್ಕಲ್: ಗೂಡ್ಸ್ ರೈಲಿನ ಮೇಲೇರಿ ಸೆಲ್ಫಿ ತೆಗೆಯಲು ಮುಂದಾದ ಯುವಕನೊಬ್ಬ ವಿದ್ಯುತ್ ಆಘಾತಕ್ಕೆ ಒಳಗಾಗಿ ಗಾಯಗೊಂಡ ಘಟನೆ ಸುರತ್ಕಲ್ ರೈಲ್ವೆ ಸ್ಟೇಷನ್ ನಿಲ್ದಾಣ ಸಮೀಪದ ಅಗರಮೇಲು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮಂಗಳೂರಿನ ಸಲ್ಮಾನ್ ಪಾರಿಶ್ (21) ಗಾಯಾಳು ಯುವಕ. ಸಲ್ಮಾನ್ ಸೆಲ್ಫಿ ತೆಗೆಯುವ ಉದ್ದೇಶದಿಂದ ನಿಲುಗಡೆ ಮಾಡಲಾಗಿದ್ದ ಗೂಡ್ಸ್ ರೈಲಿನ ಮೇಲೆ ಏರಿದ್ದ.
ಆದರೆ, ಪಕ್ಕದಲ್ಲೇ ಹೈವೋಲ್ಟೇಜ್ ತಂತಿಗಳಿರುವುದನ್ನು ಗಮನಿಸದೆ ಸ್ಪರ್ಶಿಸಿ, ವಿದ್ಯುತ್ ಆಘಾತವಾಗಿ ಕೆಳಗೆ ಬಿದ್ದಿದ್ದಾನೆ.
ತೀವ್ರ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Kshetra Samachara
24/11/2021 10:57 am