ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ವೈದ್ಯೆ ಸಾವಿಗೆ ಈಜು ತರಬೇತುದಾರರ ನಿರ್ಲಕ್ಷ್ಯವೇ ಕಾರಣ- ಮೃತರ ಸಂಬಂಧಿ ದೂರು

ಬಂಟ್ವಾಳ: ಅಡ್ಯನಡ್ಕ ವಾರಣಾಸಿ ಪಾರ್ಮ್‌ನಲ್ಲಿ ಕೆರೆಗೆ ಬಿದ್ದು ವೈದ್ಯೆ ಸಾವನ್ನಪ್ಪಿದ ಪ್ರಕರಣದಲ್ಲಿ ಈಜು ತರಬೇತುದಾರರ ನಿರ್ಲಕ್ಷ್ಯ ಇದೆ ಎಂಬ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಪು ಗ್ರಾಮದ ಅಡ್ಯನಡ್ಕ ವಾರಣಾಸಿ ಪಾರ್ಮ್ ನ ಪಾರ್ಥಾ ವಾರಣಾಸಿ ಆರೋಪಿಯಾಗಿದ್ದಾರೆ. ಸೆ.12ರಂದು ಕೃಷಿ ಅಧ್ಯಯನಕ್ಕೆಂದು ಆಗಮಿಸಿದ್ದ ಮೈಝಿ ಕರೋಲ್ ಫೆರ್ನಾಂಡೀಸ್ (31) ಸೆ.14ರಂದು ನೀರಾವರಿ ಕೆರೆಗೆ ಬಿದ್ದು ಮೃತಪಟ್ಟಿದ್ದರು. ಆದರೆ ಎರಡು ತಿಂಗಳ ಬಳಿಕ ಪ್ರಕರಣಕ್ಕೆ ಮರು ಜೀವ ಬಂದಿದ್ದು, ಕೆರೆಗೆ ಸೂಕ್ತ ತಡೆಗೋಡೆ, ಬೇಲಿಯನ್ನು ನಿರ್ಮಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ 15 ಅಡಿ ಆಳದ ಕೆರೆಗೆ ಮೃತಪಟ್ಟಿದ್ದಾರೆ. ಈ ಸಾವಿನಲ್ಲಿ ಸಂಶಯವಿದೆ ಎಂದು ಮೆಬಲ್ ಫೆರ್ನಾಂಡೀಸ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

24/11/2021 09:46 am

Cinque Terre

9.46 K

Cinque Terre

0

ಸಂಬಂಧಿತ ಸುದ್ದಿ