ಮಂಗಳೂರು: 8ರ ಹರೆಯದ ಬಾಲಕಿಯನ್ನು ಕೊಲೆಗೈದ ಘಟನೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟು ಸಮೀಪದ ಪರಾರಿ ಎಂಬಲ್ಲಿ ಬೆಳಕಿಗೆ ಬಂದಿದೆ.
ಗುರುಪುರ ಸೇತುವೆ ಹತ್ತಿರದ ಪರಾರಿ ಕ್ರಾಸ್ನಲ್ಲಿ ರಾಜ್ ಟೈಲ್ಸ್ ಎಂಬ ಫ್ಯಾಕ್ಟರಿ ಇದೆ. ಇಲ್ಲಿ ಕರ್ನಾಟಕದ 10 ಮತ್ತು ಉತ್ತರ ಭಾರತದ ಹಲವು ಯುವಕರು ಹಾಗೂ ನಾಲ್ಕೈದು ಮಹಿಳೆಯರ ಸಹಿತ ಸುಮಾರು 30ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಅಸ್ಸಾಂ ಕುಟುಂಬದ ಮಹಿಳೆಯ 8ರ ಹರೆಯದ ಪುತ್ರಿ ರವಿವಾರ ಸಂಜೆ 4 ಗಂಟೆಯಿಂದ ದಿಢೀರ್ ನಾಪತ್ತೆಯಾಗಿದ್ದಳು.
ಹುಡುಕಾಡಿದಾಗ ಸಂಜೆ ಹೊತ್ತಿಗೆ ಕಾರ್ಖಾನೆಯ ಸಮೀಪದ ಮೋರಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಈ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರೇ ಅತ್ಯಾಚಾರಗೈದು ಕೊಲೆ ಮಾಡಿರಬೇಕು ಎಂಬ ಶಂಕೆ ವ್ಯಕ್ತವಾಗಿದ್ದು, ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಹಲವು ಮಂದಿ ಯುವಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.
Kshetra Samachara
21/11/2021 10:56 pm