ಮಂಗಳೂರು: ಎಸ್ಎಸ್ಎಲ್ ಸಿ ಓದುತ್ತಿರುವ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಮಗುವಿನ ಜನನಕ್ಕೆ ಕಾರಣನಾದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ
ಬಂಧಿಸಿದ್ದಾರೆ.
ಉಪ್ಪಿನಂಗಡಿಯ ಹಿರೆಬಂಡಾಡಿ ಗ್ರಾಮದ ಮದ್ಮಿತ್ತಿಮಾರು ನಿವಾಸಿ ಕೇಶವ(34) ಅತ್ಯಾಚಾರ ಆರೋಪಿ.
ಈ ಅಪ್ರಾಪ್ತ ಬಾಲಕಿಯ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿದೆಯೆಂದು ಪೋಷಕರು ಚಿಕಿತ್ಸೆ ಕೊಡಿಸಲೆಂದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತಪಾಸಣೆ ನಡೆಸಿದ ವೈದ್ಯರಿಗೆ ಆಕೆ ತುಂಬು ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ಇದೀಗ ಆಕೆ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆಸ್ಪತ್ರೆಯ ವೈದ್ಯಾಧಿಕಾರಿಗಳು ಈ ವಿಚಾರವನ್ನು ಉಪ್ಪಿನಂಗಡಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯನ್ನು ವಿಚಾರಣೆ ನಡೆಸಿದ್ದಾರೆ. ಆಗ ಉಪ್ಪಿನಂಗಡಿಯ ಹಿರೆಬಂಡಾಡಿ ಗ್ರಾಮದ ಮದ್ಮಿತ್ತಿಮಾರು ನಿವಾಸಿ ಕೇಶವ ಎಂಬಾತ ಅತ್ಯಾಚಾರಗೈದಿರುದಾಗಿ ಬಾಲಕಿ ಹೇಳಿದ್ದಾಳೆ. ಪೊಕ್ಸೊ ಕಾಯ್ದೆಯಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
Kshetra Samachara
20/11/2021 11:32 am