ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅನಾರೋಗ್ಯ ಚಿಂತೆ; ಹಿರಿಯ ಜೀವ ನೇಣಿಗೆ ಶರಣು

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮಟ್ಟು ಎಂಬಲ್ಲಿ ಹಿರಿಯರೊಬ್ಬರು ಅನಾರೋಗ್ಯದಿಂದಾಗಿ ಜೀವನದಲ್ಲಿ ಜುಗುಪ್ಸೆ ಹೊಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳೀಯ ನಿವಾಸಿ ಪ್ರೇಮಾನಂದ ಸುವರ್ಣ(62) ಮೃತಪಟ್ಟವರು. ಅವರು 30 ವರ್ಷಗಳ ಹಿಂದೆ ಮುಂಬೈನಲ್ಲಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ನಿವೃತ್ತಿ ಬಳಿಕ ಮುಲ್ಕಿಯ ಮಟ್ಟುವಿನ ತಮ್ಮ ಕುಟುಂಬದವರ ಮನೆಯಲ್ಲಿ ನೆಲೆಸಿದ್ದರು.

ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಇದ್ದು ಗುಣಮುಖರಾಗುವ ಭರವಸೆ ಇರುವಾಗಲೇ ಇಂದು ಮಧ್ಯಾಹ್ನ ಯಾರು ಇಲ್ಲದ ವೇಳೆ ಮನೆಯ ಪ್ರಥಮ ಅಂತಸ್ತಿನ ಸ್ಟೀಲ್ ರೀಲಿಂಗ್ಸ್ ಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಧ್ಯಾಹ್ನದ ಮನೆಗೆ ಬಂದ ಮೃತರ ತಂಗಿ ಪ್ರೇಮಲತಾ ಅವರು ಅಣ್ಣ ಕಾಣಿಸದಿರುವುದನ್ನು ಕಂಡು ಗಾಬರಿಯಾಗಿ ಹುಡುಕಾಡಿದಾಗ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ತಮ್ಮನ ಪತ್ನಿ ಅಮಿತಾ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

19/11/2021 09:55 pm

Cinque Terre

11.85 K

Cinque Terre

0

ಸಂಬಂಧಿತ ಸುದ್ದಿ