ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಹೆದ್ದಾರಿಯಲ್ಲಿ ಇಂದು ಮುಂಜಾವ ಅಡುಗೆ ಅನಿಲ ಟ್ಯಾಂಕರ್, ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಗೆ ವಾಲಿಕೊಂಡು ನಿಂತ ಪರಿಣಾಮ, ಕೆಲಕಾಲ ಆತಂಕದ ಸನ್ನಿವೇಶ ನಿರ್ಮಾಣವಾಯಿತು.
ಮಂಗಳೂರಿನಿಂದ ಅನಿಲ ತುಂಬಿಸಿಕೊಂಡು ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಟ್ಯಾಂಕರ್ ಬೆಳ್ಳಂಬೆಳಗ್ಗೆ ಪಾಣೆಮಂಗಳೂರು ಹೆದ್ದಾರಿಯ ಮಾರುತಿ ಶೋರೂಮ್ ಬಳಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುವ ಪ್ರಯತ್ನದಲ್ಲಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ರಸ್ತೆ ಬದಿಗೆ ವಾಲಿ ನಿಂತಿತು.
ಇದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬಳಿಕ ಪೊಲೀಸರು ಕ್ರೇನ್ ತರಿಸಿ ಯಥಾಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು. ಪಾಣೆಮಂಗಳೂರು ಆಲಡ್ಕ ಒಳರಸ್ತೆಯಾಗಿ ಕೆಲಕಾಲ ವಾಹನಗಳು ಸಂಚರಿಸಿದವು.
Kshetra Samachara
19/11/2021 12:37 pm