ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕ ಪೇಟೆಯಲ್ಲಿ ನ.15ರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಕಬಕ ರೋಟರಿ ಕಟ್ಟಡದಲ್ಲಿರುವ ಹೋಟೆಲ್ ವಿಜಿ ಹಾಗೂ ಬ್ರೈಟ್ ಕಾಂಪ್ಲೆಕ್ಸ್ ನಲ್ಲಿರುವ ಕಬಕ ಜನರಲ್ ಸ್ಟೋರ್ ನಿಂದ ನಗದು ಮತ್ತು ಸೊತ್ತು ಕಳವಾಗಿದೆ.
ರೋಲಿಂಗ್ ಶಟರ್ ನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ನಗದು ಹಾಗೂ ಚಿಲ್ಲರೆ ಸಾಮಗ್ರಿ ಕಳವು ಮಾಡಿದ್ದಾರೆ. ಸ್ಥಳೀಯ ಗ್ಯಾರೇಜಿಗೂ ಕಳ್ಳರು ನುಗ್ಗಿದ್ದಾರೆ. ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದಾರೆ.
ಕಬಕ ಜನರಲ್ ಸ್ಟೋರ್ ನಿಂದ ಕಳವು ಮಾಡಿದ ಬಿಸ್ಕೆಟ್ ಮತ್ತು ಚಾಕೋಲೆಟ್ ಪ್ಯಾಕ್ ಗಳನ್ನು ಪಕ್ಕದ ಅಂಗಡಿಯ ಜಗುಳಿಯಲ್ಲಿ ಬಿಟ್ಟು ಹೋಗಿದ್ದಾರೆ. ಕಳವು ನಡೆದಿರುವ ಅಂಗಡಿಗಳಿಗೆ ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ. ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Kshetra Samachara
16/11/2021 12:22 pm