ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲದಲ್ಲಿ ಯುವತಿ ಆತ್ಮಹತ್ಯೆ ಪ್ರಕರಣ: ಡೆತ್ ನೋಟ್ ಆಧರಿಸಿ ನಾಲ್ವರ ವಿರುದ್ಧ ಪ್ರಕರಣ

ಬಂಟ್ವಾಳ: ಕಳೆದ ಅಕ್ಟೋಬರ್ 10ರಂದು ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ದೊರಕಿದ ಡೆತ್ ನೋಟ್ ಆಧಾರದಲ್ಲಿ ವಿಟ್ಲ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಕೆರೆಗೆ ಯುವತಿಯೊಬ್ಬಳು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಕೆರೆಯ ಬಳಿ ದೊರೆತ ಡೆತ್ ನೋಟ್ ಆಧರಿಸಿ ಪೊಲೀಸರು ದಿನೇಶ್, ಪ್ರಶಾಂತ್, ಯಶವಂತ್, ರಕ್ಷಿತ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ಅ.10ರಂದು ನಿಶ್ಮಿತಾ ಎಂಬ ಯುವತಿ ನಾಪತ್ತೆಯಾಗಿದ್ದಳು. ಮರುದಿನ ಬೆಳಗ್ಗೆ ಅವಳ ಶವ ಕೆರೆಯಲ್ಲಿ ಪತ್ತೆಯಾಗಿತ್ತು. ಮೆಡಿಕಲ್ ಒಂದರಲ್ಲಿ ಕೆಲಸಕ್ಕಿದ್ದ ಈಕೆಯ ಬ್ಯಾಗ್, ಚಪ್ಪಲಿ ಕೆರೆ ಬಳಿ ಪತ್ತೆಯಾಗಿದ್ದು, ಅಲ್ಲಿ ಡೆತ್ ನೋಟ್ ಕೂಡ ಇತ್ತು, ಅದರಲ್ಲಿ ಈ ಯುವಕರ ಹೆಸರುಗಳು ಇದ್ದವು ಎನ್ನಲಾಗಿದ್ದು, ಹೆಚ್ಚಿನ ವಿವರಗಳು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ.

Edited By : Nagaraj Tulugeri
Kshetra Samachara

Kshetra Samachara

12/11/2021 09:29 am

Cinque Terre

14.42 K

Cinque Terre

1

ಸಂಬಂಧಿತ ಸುದ್ದಿ