ಮಂಗಳೂರು: ರೆಸ್ಟೋರೆಂಟ್ ಗೆ ಯುವಕನೊಂದಿಗೆ ಬಂದ ಯುವತಿಯನ್ನು ಚುಡಾಯಿಸಿದ ಆರೋಪದ ಹಿನ್ನೆಲೆಯಲ್ಲಿ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದ ಘಟನೆ ನಗರದ ಕದ್ರಿ ಬಟ್ಟಗುಡ್ಡೆ ಬಳಿ ನಡೆದಿದೆ.
ರೆಸ್ಟೋರೆಂಟ್‌ಗೆ ಯುವ ಜೋಡಿ ಬಂದಿತ್ತು. ಈ ಸಂದರ್ಭ ಅಲ್ಲಿದ್ದ ಯುವಕರ ತಂಡವೊಂದು ಯುವತಿಗೆ ತಮಾಷೆ ಮಾಡಿದ್ದರೆನ್ನಲಾಗಿದೆ. ಇದರಿಂದ ಕೋಪಗೊಂಡ ಯುವತಿ ಜೊತೆಗಿದ್ದ ಯುವಕ ಚುಡಾಯಿಸಿದವರೊಂದಿಗೆ ತಗಾದೆ ತೆಗೆದಿದ್ದಾನೆ. ಈ ಸಂದರ್ಭ ವಾಗ್ವಾದ ನಡೆದಿದ್ದು, ಯುವಕ ಫೋನ್ ಮಾಡಿ ತನ್ನ ಗೆಳೆಯರನ್ನು ಕರೆಸಿದ್ದಾನೆ. ಪರಿಣಾಮ ಇನ್ನಷ್ಟು ಯುವಕರು ಜಮಾಯಿಸಿದ್ದು ಇತ್ತಂಡ ಮಧ್ಯೆ ಹೊಡೆದಾಟ ನಡೆದಿದೆ.
ಈ ಸಂದರ್ಭ ಕಲ್ಲಿನಿಂದ ಹಲ್ಲೆ ನಡೆದಿರುವ ಹಿನ್ನೆಲೆಯಲ್ಲಿ ಯುವಕನೊಬ್ಬನ ಹಣೆಗೆ ಗಾಯವಾಗಿದೆ. ಈ ಬಗ್ಗೆ ಮಾಹಿತಿ ತಿಳಿದು, ಕದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪೊಲೀಸರನ್ನು ಕಂಡ ಕೂಡಲೇ ಯುವಕರ ತಂಡವೊಂದು ಸ್ಥಳದಿಂದ ಪರಾರಿಯಾಗಿದೆ. ಬಳಿಕ ಪೊಲೀಸರು ವಿಚಾರಣೆ ನಡೆಸಿ, ಯುವತಿಯನ್ನು ಕಳುಹಿಸಿಕೊಟ್ಟಿದ್ದಾರೆ.
Kshetra Samachara
04/11/2021 07:35 pm