ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಸ್ ನಲ್ಲಿ ಸಹೋದರಿಯರ ವೀಡಿಯೋ ಚಿತ್ರೀಕರಿಸಿದ ಕಾಮುಕನಿಗೆ ಥಳಿತ ; ಆರೋಪಿ ಪೊಲೀಸ್ ವಶಕ್ಕೆ

ಮಂಗಳೂರು: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಹೋದರಿಯರಿಬ್ಬರ ವೀಡಿಯೋವನ್ನು ಮೊಬೈಲ್ ಮೂಲಕ ಚಿತ್ರೀಕರಿಸಿರುವ ಕಾಮುಕನನ್ನು ಪ್ರಯಾಣಿಕರೇ ಸೇರಿ ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಇಂದು ಮಂಗಳೂರಿನ ಜಪ್ಪಿನಮೊಗರುವಿನಲ್ಲಿ ನಡೆದಿದೆ.

ಮಡಿಕೇರಿ ಮೂಲದ ಮಹಮ್ಮದ್ ಯೂಸುಫ್ ಸಹೋದರಿಯರ ವೀಡಿಯೋ ಚಿತ್ರೀಕರಣ ಮಾಡಿ ಧರ್ಮದೇಟು ತಿಂದ ಕಾಮುಕ. ಸಹೋದರಿಯರಿಬ್ಬರು ತಲಪಾಡಿಯ ರೂಟ್ ನಂ. 42ರ ಸಿಟಿ ಬಸ್ ನಲ್ಲಿ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು‌. ಬಸ್ ತಲಪಾಡಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿತ್ತು. ಈ ವೇಳೆ ಆರೋಪಿ ಯೂಸುಫ್ ತೊಕ್ಕೊಟ್ಟಿನಲ್ಲಿ ಬಸ್ ಹತ್ತಿದ್ದಾನೆ. ಬಳಿಕ ಬಸ್ ನಲ್ಲಿ ಚಾಲಕನ ಹತ್ತಿರದ ಕ್ಯಾಬಿನ್‌ ಸೀಟಲ್ಲಿ ಕುಳಿತಿದ್ದ ಈ ಸಹೋದರಿಯರಿಬ್ಬರ ವೀಡಿಯೋವನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ.

ಆತ ಚಿತ್ರೀಕರಣ ಮಾಡುವುದನ್ನು ಪ್ರಯಾಣಿಕನೋರ್ವ ಗಮನಿಸಿದ್ದಾನೆ. ಆತ ಆರೋಪಿಯ ಕೃತ್ಯವನ್ನು ಸಹೋದರಿಯರ ಗಮನಕ್ಕೆ ತಂದಿದ್ದಾನೆ. ತಕ್ಷಣ ಈ ಬಗ್ಗೆ ತಿಳಿದ ಬಸ್ ನಲ್ಲಿದ್ದ ಇತರ ಪ್ರಯಾಣಿಕರು ಈ ವಿಕೃತ ಕಾಮುಕನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಪ್ಪಿನಮೊಗರು ಎಂಬಲ್ಲಿ ಆತನನ್ನು ಬಸ್ ನಿಂದ ಇಳಿಸಿ ಥಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

03/11/2021 08:40 pm

Cinque Terre

19.92 K

Cinque Terre

5

ಸಂಬಂಧಿತ ಸುದ್ದಿ