ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯ ಮುಂಡಾಜೆ ಗ್ರಾಮದ ಹೊಸಕಾಪು ಹರೀಶ್ ಗೌಡರ ಜಾಗದಲ್ಲಿ ಹಾದುಹೋಗುವ ಹೊಳೆಯಲ್ಲಿ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಬಂಟ್ವಾಳ ಎಎಸ್ಪಿ ಮತ್ತು ತಂಡ ಇಂದು ಮುಂಜಾವ ಮಾರುವೇಷದಲ್ಲಿ ಹೋಗಿ ದಾಳಿ ನಡೆಸಿದ್ದಾರೆ.
ಈ ಸಂದರ್ಭ ಮರಳುಗಾರಿಕೆಗೆ ಬಳಸುತ್ತಿದ್ದ ಎರಡು ದೋಣಿ ಹಾಗೂ ಎರಡು ಟಿಪ್ಪರ್ ವಶಪಡಿಸಿಕೊಂಡು ಧರ್ಮಸ್ಥಳ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಉಜಿರೆ ನಿವಾಸಿ ಸುನಿಲ್ ಎಂಬವರ ಸೈಂಟ್ ಅಂತೋಣಿ (S.A) ಮತ್ತು ಸೋಮಂದಡ್ಕದ ನಿವಾಸಿ ರಾಧಾಕೃಷ್ಣ ಅವರ ಲಕ್ಷ್ಮೀ ವೆಂಕಟೇಶ್ ಎಂಬ ಹೆಸರಿನ ಟಿಪ್ಪರ್ ವಶಪಡಿಸಿಕೊಳ್ಳಲಾಗಿದೆ.
ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಮೇಲಿನ ದಾಳಿಯಲ್ಲಿ ಒಂದು ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ.
ಎರಡು ಕಡೆ ದಾಳಿ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
Kshetra Samachara
03/11/2021 11:40 am