ಬಜಪೆ:ಜಿಲ್ಲೆಯಲ್ಲಿಹೆಚ್ಚಾಗುತ್ತಿರುವ ಸರಗಳ್ಳತನಗಳನ್ನು ತಡೆಗಟ್ಟುವ ಸಲುವಾಗಿ ಮಂಗಳೂರು ಪೊಲೀಸ್ ಆಯುಕ್ತರ ಆದೇಶದಂತೆ ಬಜಪೆ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 7 ಮಂದಿ ಕುಖ್ಯಾತ ಸರಗಳ್ಳರನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಕಾವೂರು ಪಿಂಟೋ ವ್ಯಾಲಿ ರಸ್ತೆಯ ನ್ಯೂ ಅರಬಿ ಜಾಬೀರ್ ಮಂಝಿಲ್ ನಿವಾಸಿ ಸಫ್ವಾನ್ ಯಾನೆ ಸಪ್ಪು ಯಾನೆ ದೊದ್ದೆ(29), ಕಾವೂರು ಜುಮ್ಮಾ ಮಸೀದಿ ರಸ್ತೆ ಬದ್ರಿಯಾ ಕಾಟೇಜ್ ನಿವಾಸಿ ಮೊಹಮ್ಮದ್ ತೌಸೀಫ್ ಯಾನೆ ಹ್ಯಾರೀಸ್ ಆಚಿ(30), ಕಾವೂರು ಶಾಂತಿನಗರ ಕೆ. ಎಸ್ ಕಾಟೇಜ್ ನಿವಾಸಿ ಅಬ್ದುಲ್ ಖಾದರ್ ಸಿನಾನ್(30), ಮಲ್ಲೂರಿನ ಚರ್ಚ್ ರಸ್ತೆ ಬದ್ರಿಯಾ ಮಸೀದಿ 9ನೇ ಕ್ರಾಸ್ ನಿವಾಸಿ ಮೊಹಮ್ಮದ್ ಫಜಲ್ ಯಾನೆ ಪಜ್ಜು(32), ಸುರತ್ಕಲ್ ಚೊಕ್ಕ ಬೆಟ್ಟು ಟಿಕ್ ಹಟ್ ಬಳಿಯ ನಿವಾಸಿ ಮೂಲತಃ ಕುಂದಾಪುರ ಕುಂಭಾಶಿ ಮೂಡುಗೋಪಾಡಿ ಆನೆಗುಡ್ಡೆ ಯ ಮುಜಾಹಿದ್ ರೆಹಮಾನ್ ಯಾನೆ ಮುಜ್ಜ (23), ಮತ್ತು ಸುರತ್ಕಲ್ ಚೊಕ್ಕಬೆಟ್ಟು ಟಿಕ್ ಹಟ್ ಬಳಿಯ ನಿವಾಸಿ ಅರ್ಷದ್(34) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಸುಮಾರು 10 ಲಕ್ಷ ಮೌಲ್ಯದ ಒಟ್ಟು 210 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನದ ಕರಿಮಣಿ ಸರ ಮತ್ತು ಚಿನ್ನದ ಸರಗಳು ಹಾಗೂ ಈ ಕೃತ್ಯಗಳಿಗೆ ಉಪಯೋಗಿಸಿದ 3 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳೂರಿನದ್ಯಾಂತ ನಡೆದ ಸರಣಿ ಸರಗಳ್ಳತನ, ಪೊಲೀಸರ ಮೇಲೆ ಹಲ್ಲೆ, ಸುಲಿಗೆ ಮತ್ತು ದ್ವಿಚಕ್ರ ವಾಹನಗಳ
ಕಳವಿಗೆ ಸಂಬಂಧಿಸಿದಂತೆ ಒಟ್ಟು 24 ಪ್ರಕರಣಗಳು, ಸ್ಮಾರ್ಟ್ ಸಿಟಿ ಧ್ವಂಸ, ಹಣಕ್ಕಾಗಿ ಬೇಡಿಕೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ಕಿಡ್ನಾಪ್, ಕೊಲೆ ಯತ್ನ ಸಾರ್ವಜನಿಕ ಅಸ್ತಿ ನಷ್ಟ ಪ್ರಕರಣ ಹಾಗೂ ಈ ಹಿಂದೆ ಮಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣದಲ್ಲಿ
ಪ್ರಮುಖವಾಗಿ ಗುರುತಿಸಿಕೊಂಡು ಒಟ್ಟು 30 ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ತಿಳಿದು
ಬಂದಿದೆ.
ಮಂಗಳೂರು ಪೊಲೀಸ್ ಆಯುಕ್ತರಾದ ಎನ್ ಶಶಿ ಕುಮಾರ್ IPS ರವರ ಮಾರ್ಗದರ್ಶನದಂತೆ, DCP ಯವರಾದ ಹರಿರಾಮ್ ಶಂಕರ್ (ಕಾ&ಸು)ಮತ್ತು ದಿನೇಶ್ ಕುಮಾರ್ (ಅಪರಾಧ ಮತ್ತು ಸಂಚಾರ) ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ
ವಿಭಾಗದ ACP ಎನ್. ಮಹೇಶ್ ಕುಮಾರ್ ಮತ್ತು ಬಜಪೆ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ.ರವರ ನೇತೃತ್ವದಲ್ಲಿ ಪಿ.ಎಸ್.ಐ ಪೂವಪ್ಪ ಹೆಚ್.ಎಂ, ಸಿಬ್ಬಂದಿಗಳಾದ ರಾಮ ಪೂಜಾರಿ ಮೇರಮಜಲು, ಮೊಹಮ್ಮದ್, ಸಂತೋಷ ಡಿ.ಕೆ ಸುಳ್ಯ, ರಶೀದ ಶೇಖ್, ರಾಜೇಶ್, ಹೊನ್ನಪ್ಪ ಗೌಡ, ಸಿದ್ದಲಿಂಗಯ್ಯ ಹಿರೇಮಠ, ಸಂಜೀವ ಭಜಂತ್ರಿ, ವಿನೋದ್ ,ಉಮೇಶ್ ಕೌಜಲಗಿ ರವರುಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
Kshetra Samachara
02/11/2021 10:04 pm