ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಪ್ಪನಾಡು ಬೀಚ್ ಬಳಿಯ ಶಾಂಭವಿ ನದಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಮೃತ ವ್ಯಕ್ತಿಯನ್ನು ಕಿನ್ನಿಗೋಳಿ ಸಮೀಪದ ಐಕಳ ನೆಲ್ಲಿಗುಡ್ಡೆ ನಿವಾಸಿ ರೇಮಂಡ್ ಡಿಕ್ರೂಸ್ (68) ಎಂದು ಗುರುತಿಸಲಾಗಿದೆ.
ರೇಮಂಡ್ ಅವರು ಕಳೆದ ಕೆಲ ವರ್ಷಗಳ ಹಿಂದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಭಾನುವಾರ ಮುಂಜಾವ ಆಸ್ಪತ್ರೆಗೆ ಔಷಧ ತರಲೆಂದು ಐಕಳ ನೆಲ್ಲಿಗುಡ್ಡೆಯ ತಮ್ಮ ಮನೆಯಿಂದ ತೆರಳಿದ್ದು ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮುಲ್ಕಿ ಸಮೀಪದ ಬಪ್ಪನಾಡು ಬೀಚ್ ಸಮೀಪದ ಪಾರ್ಕ್ ಬಳಿಯ ಶಾಂಭವಿ ನದಿ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸ್ಥಳಕ್ಕೆ ಮುಲ್ಕಿ ಪೊಲೀಸರು ಧಾವಿಸಿ, ಶವದ ಗುರುತು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ.
ಮೃತರ ಪುತ್ರ ರೋಷನ್ ನೀಡಿದ ದೂರಿನಂತೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
01/11/2021 10:09 pm