ಕಾಪು: ಕಾಪು, ಕಟಪಾಡಿ, ಪಡುಬಿದ್ರಿ, ಶಿರ್ವ, ಕಾರ್ಕಳ, ಬೆಳ್ಮಣ್ ಮುಂತಾದ ಕಡೆ ನಿಲ್ಲಿಸಿದ್ದ ಲಾರಿ, ಬಸ್ಸು, ಟೆಂಪೋ, ಟ್ರಾಕ್ಟರ್, ಕ್ರೇನ್ ಇತ್ಯಾದಿ ವಾಹನಗಳ ಬ್ಯಾಟರಿ ಕಳವುಗೈಯ್ಯುತ್ತಿದ್ದ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ಪೊಲೀಸ್ ಉಪಾಧೀ ಕ್ಷಕರ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಕಾಪು ಮತ್ತು ಮೂಳೂರು ಪರಿಸರದ ನಿವಾಸಿಗಳಾದ ಮಹಮ್ಮದ್ ಶರೀಫ್, ಮೊಹಮ್ಮದ್ ಅಲ್ತಾಫ್, ಫರ್ಜಿನ್ ಅಹಮ್ಮದ್, ಅಫ್ಜಲ್ ರೆಹಮಾನ್, ಮಹಮ್ಮದ್ ಇಝಾಝ್ ಎಂಬವರನ್ನು ಬಂಧಿಸಿ, ಬ್ಯಾಟರಿ-22, ಸ್ವಿಫ್ಟ್ ಕಾರು 2, ಆಲ್ಟೋ ಕಾರು-1 ಹಾಗೂ 9.80 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಕಾಪು, ಪಡುಬಿದ್ರಿ, ಶಿರ್ವ, ಕಾರ್ಕಳ ನಗರ ಮತ್ತು ಕಾರ್ಕಳ ಗ್ರಾಮಾಂತರ ಠಾಣೆಗಳಲ್ಲಿ ಬ್ಯಾಟರಿ ಕಳವು ಪ್ರಕರಣ ದಾಖಲಾಗಿತ್ತು. ಉಡುಪಿ ಎಸ್ಪಿ ಎನ್. ವಿಷ್ಣುವರ್ಧನ್, ಅಡಿಷನಲ್ ಎಸ್ಪಿ ಕುಮಾರಚಂದ್ರ ಅವರ ನಿರ್ದೇಶನದಂತೆ, ಪೊಲೀಸ್ ಉಪಾಧೀಕ್ಷಕ ವಿಜಯ ಪ್ರಸಾದ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಪಿಎಸ್‌ಐಗಳಾದ ರಾಘವೇಂದ್ರ, ತಿಮ್ಮೇಶ್, ಅಪರಾಧ ಪತ್ತೆ ತಂಡದ ಪ್ರವೀಣ್ ಕುಮಾರ್, ನಾರಾಯಣ,ರಾಜೇಶ್, ಹೇಮರಾಜ್, ಸಂದೇಶ, ಆನಂದ ,ರಘು, ಸಂತೋಷ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Kshetra Samachara
01/11/2021 09:43 pm