ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವ್ಯಾಯಾಮದ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ :ದೈಹಿಕ ಶಿಕ್ಷಕನ ವಿರುದ್ಧ ಕೇಸ್

ಪುತ್ತೂರು : ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಪುತ್ತೂರಿನ ಸಂತ ಫಿಲೋಮಿನಾ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರೊಬ್ಬರನ್ನು ಪೋಕ್ಸೊ ಕಾಯ್ದೆಯಡಿ ಪುತ್ತೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರಿನ ಕೊಂಬೆಟ್ಟು ನಿವಾಸಿ ಎಲ್ಯಾಸ್ ಪಿಂಟೋ ಬಂಧಿತ ಆರೋಪಿ.

ವಿದ್ಯಾಸಂಸ್ಥೆಯ ವಸತಿ ನಿಲಯದಲ್ಲಿರುವ ಮಡಿಕೇರಿ ಮೂಲದ ಅಪ್ರಾಪ್ತ ವಿದ್ಯಾರ್ಥಿನಿಗೆ ಅ.23ರಂದು ಲೈಂಗಿಕ ಕಿರುಕುಳ ನೀಡಿದ್ದು ಆಕೆ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದರು. ಆಕೆಯ ಪೋಷಕರು ಸಂಸ್ಥೆಗೆ ಬಂದು ಆಕೆಯನ್ನು ವಿಚಾರಿಸಿ ಬಳಿಕ ಅ.25ರಂಂದು ಸಂಜೆ ಘಟನೆಯ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ವಿದ್ಯಾರ್ಥಿನಿ ನೀಡಿದ ದೂರಿನಂತೆ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ಅವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ನೇತೃತ್ವದಲ್ಲಿ ಪುತ್ತೂರು ಕ್ಲಬ್ ಬಳಿ ಬಂಧಿಸಲಾಗಿದೆ. ಸೊಂಟ ನೋವು ಎಂದು ಹೇಳಿದ್ದ ವಿದ್ಯಾರ್ಥಿನಿಗೆ ಎಲ್ಯಾಸ್ ಪಿಂಟೋರವರು ವ್ಯಾಯಾಮ ಮಾಡಿಸಿದ್ದಾರೆ ಈ ವೇಳೆ ಆಕೆಯ ಸೊಂಟ ಮುಟ್ಟಿದರೆಂದು ಆರೋಪ ಕೇಳಿ ಬಂದಿದೆ.

Edited By : Nirmala Aralikatti
Kshetra Samachara

Kshetra Samachara

26/10/2021 07:41 am

Cinque Terre

12.66 K

Cinque Terre

0

ಸಂಬಂಧಿತ ಸುದ್ದಿ