ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಂಪಾರು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಪತ್ನಿ ಸಹಿತ ಐವರು ಆರೋಪಿಗಳು ಅರೆಸ್ಟ್ !

ಸಿದ್ದಾಪುರ: ಅಂಪಾರಿನಲ್ಲಿ ಅ. 19ರಂದು ನಡೆದಿದ್ದ ವ್ಯಕ್ತಿಯೋರ್ವರ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಪತ್ನಿ ಸಹಿತ ಐವರನ್ನು ಬಂಧಿಸಲಾಗಿದೆ.

ಆರೋಪಿಗಳಲ್ಲಿ ಇಬ್ಬರು ಬಾಲಕರಾಗಿದ್ದು, ಅವರನ್ನು ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಗಿದೆ.

ಅಂಪಾರು ಗ್ರಾಮದ ನಾಗರಾಜ (36) ಅವರು ಕೊಲೆಗೀಡಾದವರು. ಪ್ರಕರಣ ಸಂಬಂಧ ಆರೋಪಿ ಪತ್ನಿ ಮಮತಾ (34), ಆಕೆಯ ಪರಿಚಿತರಾಗಿರುವ ಕುಮಾರ್‌ ಹಾಗೂ ದಿನಕರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಇಬ್ಬರು ಬಾಲಕರನ್ನು ರಿಮ್ಯಾಂಡ್ ಹೋಮ್ ಗೆ ಕಳಿಸಲಾಗಿದೆ.

* ಸಹೋದರಿಯಿಂದ ದೂರು:

ಶವಾಗಾರದಲ್ಲಿರುವ ಶವವನ್ನು ಕುಟುಂಬದವರು ಪರೀಕ್ಷಿಸಿದಾಗ ಮೈಮೇಲೆ ಮತ್ತು ಕುತ್ತಿಗೆ ಭಾಗದಲ್ಲಿ ಗಾಯಗಳು ಕಂಡುಬಂದಿದ್ದವು. ದೇಹದ ಮೇಲಿದ್ದ ಕೆಲವೊಂದು ಗಾಯಗಳ ಕುರುಹುಗಳಿಂದ ಇದು ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಎಂದು ನಾಗರಾಜ ಅವರ ಸಹೋದರಿ ನಾಗರತ್ನಾ (40) ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನಂತೆ ಶಂಕರನಾರಾಯಣ ಪೊಲೀಸರು ತನಿಖೆ ನಡೆಸಿದಾಗ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Edited By : Vijay Kumar
Kshetra Samachara

Kshetra Samachara

22/10/2021 03:45 pm

Cinque Terre

8.85 K

Cinque Terre

0

ಸಂಬಂಧಿತ ಸುದ್ದಿ