ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ವರದಕ್ಷಿಣೆಗಾಗಿ ಮಗಳ ಕತ್ತು ಹಿಸುಕಿ ಕೊಲೆ; ತಂದೆಯಿಂದ ದೂರು

ಬೆಳ್ತಂಗಡಿ: ವರದಕ್ಷಿಣೆಗಾಗಿ ತನ್ನ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಮೃತ ಯುವತಿಯ ತಂದೆ ದೂರು ನೀಡಿದ್ದಾರೆ.

ಬೆಳ್ತಂಗಡಿ ತಾಲೂಕು ಕೊಕ್ಕಡ ಸಮೀಪದ ಪುತ್ಯೆ ಮನೆ ರಾಜೇಶ್ ಎಂಬಾತನ ಪತ್ನಿ ರಶ್ಮಿತಾ (28) ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಆದರೆ, ಮೃತ ಮಹಿಳೆಯ ತಂದೆ 'ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಕೊಲೆ ಗೈಯಲಾಗಿದೆ' ಎಂದು ದೂರು ನೀಡಿದ್ದಾರೆ.

2 ವರ್ಷಗಳ ಹಿಂದೆ ರಶ್ಮಿತಾರನ್ನು ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂದರ ಹರೆಯದ ಗಂಡು ಮಗು ಇದ್ದು, ಕೆಲವು ದಿನಗಳಿಂದ ರಾಜೇಶ್, ರಶ್ಮಿತಾ ಅವರಲ್ಲಿ ವರದಕ್ಷಿಣೆ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ತಂದೆಯಲ್ಲಿ ಮಗಳು ತಿಳಿಸಿದ್ದರು.

ಈ ಬಗ್ಗೆ ತಂದೆ, ಮಗಳಿಗೆ ಸಮಾಧಾನ ಪಡಿಸುತ್ತಿದ್ದರು ಎನ್ನಲಾಗಿದೆ. ಆದರೆ, ಅ.18ರಂದು ಮಧ್ಯಾಹ್ನ ಮಗಳ ಸಾವಿನ ಸುದ್ದಿ ಮನೆಯವರಿಗೆ ತಿಳಿದಿದ್ದು, ಅವರು ಬಂದು ನೋಡಿದಾಗ ಮೃತದೇಹವನ್ನು ಮಂಚದಲ್ಲಿ ಮಲಗಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅಳಿಯ ರಾಜೇಶನೇ, ಮಗಳು ರಶ್ಮಿತಾಳನ್ನು ವರದಕ್ಷಿಣೆಗಾಗಿ ಕತ್ತು ಹಿಸುಕಿ ಕೊಂದು, ಕುತ್ತಿಗೆಗೆ ಬಟ್ಟೆ ಕಟ್ಟಿ ನೇತಾಡಿಸಿದ್ದಾನೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತರ ತಂದೆ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.‌ ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Edited By : Vijay Kumar
Kshetra Samachara

Kshetra Samachara

19/10/2021 01:48 pm

Cinque Terre

11.29 K

Cinque Terre

0

ಸಂಬಂಧಿತ ಸುದ್ದಿ