ಕಾಸರಗೋಡು : ಮೂರು ತಿಂಗಳ ಮಗು ಸಹಿತ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ಸಮೀಪದ ನೀಲೇಶ್ವರದಲ್ಲಿಂದು ನಡೆದಿದೆ.
ನೀಲೇಶ್ವರ ಕಡಿಂಞಮೂಲೆಯ ರಮ್ಯಾ (31), ಮೃತರು ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಮಗು ಸಹಿತ ಅವರು ಬಾವಿಗೆ ಹಾರಿದ್ದಾರೆ. ಮನೆಯವರು ಹಾಗೂ ಸ್ಥಳೀಯರು ಅವರನ್ನು ಬಾವಿಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಇಬ್ಬರು ಮೃತಪಟ್ಟಿದ್ದಾರೆ. ಮಾನಸಿಕ ಖಿನ್ನತೆ ಕೃತ್ಯಕ್ಕೆ ಕಾರಣ ಎಂದು ದೂರಲಾಗಿದೆ. ಈ ಬಗ್ಗೆ ನೀಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
18/10/2021 04:18 pm