ಮಂಗಳೂರು: ನಾಗಬನವೊಂದಕ್ಕೆ ನುಗ್ಗಿರುವ ದುಷ್ಕರ್ಮಿಗಳು ನಾಗ ವಿಗ್ರಹವನ್ನು ಧ್ವಂಸಗೈದು ಅಲ್ಲಿಯೇ ಇದ್ದ ಶಿವಲಿಂಗವನ್ನು ಕದ್ದೊಯ್ದ ಘಟನೆ ನಗರದ ಬೈಕಂಪಾಡಿಯಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ಬಯಲಾಗಿದೆ.
ಬೈಕಂಪಾಡಿಯಲ್ಲಿರುವ ಕರ್ಕೇರ ಕುಟುಂಬಸ್ಥರ ಮೂಲಸ್ಥಾನದಲ್ಲಿ ಕೃತ್ಯ ನಡೆದಿದೆ. ಪ್ರಕರಣ ಯಾವಾಗ ನಡೆದಿರುವುದೆಂದು ತಿಳಿದು ಬಂದಿಲ್ಲ. ಇಂದು ಬೆಳಗ್ಗೆ ಕರ್ಕೇರ ಮೂಲಸ್ಥಾನದ ಗುರಿಕಾರರು ಸಂಕ್ರಮಣ ಪೂಜೆಗೆಂದು ನಾಗದೇವರ ಬನಕ್ಕೆ ಆಗಮಿಸಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ.
ಅಲ್ಲದೆ ಮೂಲಸ್ಥಾನದ ಕಾಣಿಕೆ ಹುಂಡಿ, ಕಚೇರಿಯಲ್ಲಿದ್ದ ಕಪಾಟು, ನಂದಿ ವಿಗ್ರಹವನ್ನೂ ಹಾಳುಗೆಡವಲಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
17/10/2021 09:02 pm