ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ಶೂಟೌಟ್ ಪ್ರಕರಣ: ಆರೋಪಿ ರಾಜೇಶ್ ಪ್ರಭು ಅರೆಸ್ಟ್

ಮಂಗಳೂರು: ನಗರದ ಮೋರ್ಗನ್ಸ್ ಗೇಟ್ ನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲಕ ರಾಜೇಶ್ ಪ್ರಭುವನ್ನು ಇಂದು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಕೆಲಸದಾಳುಗಳಿಗೆಂದು ಪಿಸ್ತೂಲ್ ನಿಂದ ಹಾರಿಸಿರುವ ಗುಂಡು ತನ್ನ ಪುತ್ರನಿಗೆ ತಗುಲಿ ಆತನ ಮೆದುಳು ನಿಷ್ಕ್ರಿಯಗೊಂಡ ವಿಚಾರವು ತಿಳಿಯುತ್ತಿದ್ದಂತೆ ಉದ್ಯಮಿ ರಾಜೇಶ್ ಪ್ರಭುಗೆ ಹೃದಯಾಘಾತವಾಗಿತ್ತು. ತಕ್ಷಣ ಆತನನ್ನು ಪೊಲೀಸ್ ವಶದಲ್ಲಿರುವಂತೆಯೇ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆ ರಾಜೇಶ್ ಪ್ರಭು ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ರಾಜೇಶ್ ಪ್ರಭುವಿಗೆ ಸೇರಿದ ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೊ ಸರಕು ಸಾಗಾಟ ಸಂಸ್ಥೆಯಲ್ಲಿನ ಗೂಡ್ಸ್ ಕಂಟೈನರ್ ಚಾಲಕ ಹಾಗೂ ಕ್ಲೀನರ್‌ ಗಳಿಬ್ಬರ ಸಂಬಳದ ವಿಚಾರದಲ್ಲಿ ತಗಾದೆ ಏರ್ಪಟ್ಟಿತ್ತು. ಈ ಸಂದರ್ಭ ಆರೋಪಿ ರಾಜೇಶ್ ಪ್ರಭು, ಮೃತ ಸುಧೀಂದ್ರ ಪ್ರಭು ಸೇರಿ ಅವರಿಬ್ಬರ ನಡುವೆ ವಾಗ್ವಾದ ನಡೆಸಿದ್ದಾರೆ‌. ಆಗ ನಡೆದ ತಳ್ಳಾಟದಲ್ಲಿ ರಾಜೇಶ್ ಪ್ರಭು ತಮ್ಮ ಕೈಯಲ್ಲಿದ್ದ ಪಿಸ್ತೂಲ್ ನಿಂದ ಎರಡು ಸುತ್ತಿನ ಗುಂಡು ಹಾರಿಸಿದ್ದಾನೆ. ಆದರೆ ಗುಂಡು ಪುತ್ರ ಸುಧೀಂದ್ರನ ತಲೆಗೆ ತಗುಲಿತ್ತು. ಗಂಭೀರವಾಗಿ ಗಾಯಗೊಂಡ ಆತನನ್ನು ನಗರದ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತನ ಮಿದುಳು ನಿಷ್ಕ್ರಿಯಗೊಂಡಿದೆ.

Edited By : Nagaraj Tulugeri
Kshetra Samachara

Kshetra Samachara

07/10/2021 11:59 pm

Cinque Terre

20.51 K

Cinque Terre

5

ಸಂಬಂಧಿತ ಸುದ್ದಿ