ಮಂಗಳೂರು: ಕಾಲೇಜಿನ ಬಳಿ ನಿನ್ನೆ ಬುಧವಾರ ರಾತ್ರಿ ಅಸಭ್ಯವಾಗಿ ವರ್ತಿಸುತ್ತಿದ್ದ ಜೋಡಿಯನ್ನು ಗಮನಿಸಿದ ಬಜರಂಗ ದಳ ಕಾರ್ಯಕರ್ತರು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಈ ಜೋಡಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಅಲ್ಲಿ ನಡೆದಿದ್ದೇ ಬೇರೆ. ಬಜರಂಗ ದಳ ಕಾರ್ಯಕರ್ತರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ ಈ ಜೋಡಿ ಪೊಲೀಸರಿಗೆ ದೂರು ನೀಡಿದೆ. ಈ ದೂರಿನ ಆಧಾರವಾಗಿ ಪೊಲೀಸರು ಇಬ್ಬರು ಬಜರಂಗ ದಳ ಕಾರ್ಯಕರ್ತರನ್ನು ವಶಕ್ಕೆ ಬಂಧಿಸಿದ್ದಾರೆ. ಹಾಗೂ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
Kshetra Samachara
07/10/2021 05:25 pm