ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಎಐಸಿಸಿ ವಕ್ತಾರೆ ಲಾವಣ್ಯ ಬಳ್ಳಾಲ್‌ಗೆ ಹಲ್ಲೆ ಬೆದರಿಕೆ: ಕ್ರಮಕ್ಕೆ ಸಿದ್ದರಾಮಯ್ಯ ಪೊಲೀಸರಿಗೆ ಟ್ವೀಟ್

ಮಂಗಳೂರು: ನಗರದ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ನಡೆದ ಚರ್ಚೆಯೊಂದರಲ್ಲಿ ಕಾಂಗ್ರೆಸ್ ಪಕ್ಷದ ಎಐಸಿಸಿ ವಕ್ತಾರೆ ಲಾವಣ್ಯ ಬಳ್ಳಾಲ್ ಹಾಗೂ ಅವರ ಪುತ್ರಿಗೆ ಹಲ್ಲೆಯ ಬೆದರಿಕೆಯೊಡ್ಡಿರುವ ದುಷ್ಕರ್ಮಿಯನ್ನು ತಕ್ಷಣ ಬಂಧಿಸುವಂತೆ ರಾಜ್ಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಮಂಗಳೂರು ಪೊಲೀಸರಿಗೆ ಸೂಚಿಸಿದ್ದಾರೆ.

ಸಂಘಪರಿವಾರಕ್ಕೆ ಸೇರಿದವನೆನ್ನಲಾದ ಬೆದರಿಕೆಯೊಡ್ಡಿರುವ ದುಷ್ಕರ್ಮಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್‌ಗೆ ಟ್ವಿಟರ್‌ ಮೂಲಕ ಸೂಚನೆ ನೀಡಿದ್ದಾರೆ.

ಏನಿದು ಘಟನೆ?:

ಇತ್ತೀಚೆಗೆ ನಗರದ ಸುರತ್ಕಲ್ ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿದ್ದ ವಾಹನದ ಮೇಲೆ ದಾಳಿ, ಹಲ್ಲೆಯನ್ನು ಎಐಸಿಸಿ ವಕ್ತಾರೆ ಲಾವಣ್ಯ ಬಳ್ಳಾಲ್ ವೀಡಿಯೊ ಮಾಡಿ ಖಂಡಿಸಿದ್ದರು. ಈ ವೀಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಆ ಬಳಿಕ ಘಟನೆಯ ಬಗ್ಗೆ ಮಂಗಳೂರು ನಗರದ ಸ್ಥಳೀಯ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಚರ್ಚೆಯೊಂದನ್ನು ನಡೆದಿತ್ತು‌. ಚರ್ಚೆಯಲ್ಲಿ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಳ್ಳಾಲ್, ಬಿಜೆಪಿ ವಕ್ತಾರ ರಾಧಾಕೃಷ್ಣ, ಸಿಎಫ್‌ಐ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಸಾದಿಕ್, ಬಜರಂಗದಳದ ಪ್ರದೀಪ್ ಸರಿಪಳ್ಳ ಭಾಗವಹಿಸಿದ್ದರು. ಚರ್ಚೆಯ ಸಂದರ್ಭ ಉಡುಪಿಯಿಂದ ವ್ಯಕ್ತಿಯೊಬ್ಬ ಕರೆ ಮಾಡಿ ಲಾವಣ್ಯ ಜೊತೆ ಮಾತನಾಡಲು ಕೇಳಿಕೊಂಡಿದ್ದಾನೆ. ಬಳಿಕ ಲಾವಣ್ಯ ಅವರನ್ನು ಉದ್ದೇಶಿಸಿ, ಎಸಿ ಕಾರಿನಲ್ಲಿ ಕುಳಿತು ಸಂಘಪರಿವಾರದ ಬಗ್ಗೆ ಮಾತನಾಡುವುದಲ್ಲ. ಮಂಗಳೂರಿಗೆ ಮಗಳ ಸಹಿತ ಬನ್ನಿ, ನಿಮಗೂ ಹಲ್ಲೆ ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದ.

Edited By : Nagaraj Tulugeri
Kshetra Samachara

Kshetra Samachara

03/10/2021 02:40 pm

Cinque Terre

28.68 K

Cinque Terre

5