ಕಡಬ : ಸ್ನಾನಕ್ಕೆಂದು ನದಿ ತೀರಕ್ಕೆ ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹವು ಗುರುವಾರದಂದು ಪತ್ತೆಯಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಕಡಬ ತಾಲೂಕು ಕೊಯಿಲ ಗ್ರಾಮದ ಪರಂಗಾಜೆ ನಿವಾಸಿ ಚಂದಪ್ಪ ಗೌಡ(67) ಎಂದು ಗುರುತಿಸಲಾಗಿದೆ. ಇವರು ಮಂಗಳವಾರದಂದು ಮನೆ ಸಮೀಪ ಹರಿಯುತ್ತಿರುವ ಕುಮಾರಧಾರ ನದಿಗೆ ಸ್ನಾನಕ್ಕೆಂದು ಹೋದವರು ಕಾಣೆಯಾಗಿದ್ದರು. ಈ ಬಗ್ಗೆ ಮೃತರ ಪುತ್ರಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಮೃತದೇಹವು ಪರಂಗಾಜೆ ಸಮೀಪ ದೊರೆತಿದೆ.
Kshetra Samachara
23/09/2021 04:37 pm