ಉಡುಪಿ: ಇಂದ್ರಾಳಿ ರೈಲ್ವೆ ಹಳಿಯ ಮೇಲೆ ಅಂದಾಜು 50 ವರ್ಷದ ವ್ಯಕ್ತಿ ಶವ ಮಂಗಳವಾರ ತಡರಾತ್ರಿ ಕಂಡುಬಂದಿದೆ. ಚಲಿಸುತ್ತಿರುವ ರೈಲು ಢಿಕ್ಕಿಯಾಗಿ ಈ ವ್ಯಕ್ತಿ ಸಾವನಪ್ಪಿರ ಬಹುದೆಂದು ಶಂಕಿಸಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳದಿಂದ ಶವವನ್ನು ಮಣಿಪಾಲ ಶವಗಾರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಇಲಾಖೆಗೆ ಸಹಕರಿಸಿದರು. ಮೃತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವಾರಸುದಾರರು ತುರ್ತಾಗಿ ಮಣಿಪಾಲ ಪೊಲೀಸ್ ಠಾಣೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
Kshetra Samachara
22/09/2021 02:32 pm