ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ 8.44 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆ: ಓರ್ವ ವಶಕ್ಕೆ

ಮಂಗಳೂರು: ಅಕ್ರಮ ಸಾಗಾಟದ ಚಿನ್ನವನ್ನು ಪತ್ತೆ ಹಚ್ಚಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 8 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡು ಓರ್ವ ಪ್ರಯಾಣಿಕನನ್ನು ಬಂಧಿಸಿದ್ದಾರೆ.

ದ.ಕ.ಜಿಲ್ಲೆಯ ಬಂಟ್ವಾಳ ಮೂಲದ ಪ್ರಯಾಣಿಕ ರವಿವಾರ ನಸುಕಿನ ವೇಳೆ 4:55ರ ಸುಮಾರಿಗೆ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದನು. ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತಪಾಸಣೆ ನಡೆಸಿರುವ ವೇಳೆ ಆತ ಬಾಡಿ ಲೋಶನ್‌ ಗಳ ಪ್ಯಾಕೇಟ್ ಗಳ ಒಳಭಾಗದಲ್ಲಿ ದ್ರವ ರೂಪದಲ್ಲಿ ಚಿನ್ನವನ್ನಿರಿಸಿ ಅಕ್ರಮ ಸಾಗಾಟ ನಡೆಸುತ್ತಿರುವುದು ಪತ್ತೆಯಾಗಿದೆ.

ತಕ್ಷಣ ಆರೋಪಿಯನ್ನು ಹಾಗೂ ಆತನ ಬಳಿಯಿದ್ದ ಬಾಡಿ ಲೋಷನ್ ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ‌. ಆರೋಪಿ 18 ಕ್ಯಾರೆಟ್‌ನ 230 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಾಟ ಯತ್ನಿಸಿದ್ದ. ಇದರ ಒಟ್ಟು ಮೌಲ್ಯ 8,11,100 ರೂ. ಎಂದು ಅಂದಾಜಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

20/09/2021 11:42 am

Cinque Terre

31.46 K

Cinque Terre

1

ಸಂಬಂಧಿತ ಸುದ್ದಿ